ಕುಂಬಳಕಾಯಿ ಸೇವಿಸಿದ ಬಳಿಕ ಅದರ ಬೀಜಗಳನ್ನು ಎಸೆಯುತ್ತೀರಾ. ಹಾಗೆ ಮಾಡದಿರಿ. ಕುಂಬಳ ಕಾಯಿ ಬೀಜದ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ.
ಕುಂಬಳ ಕಾಯಿ ಬೀಜ ಅಧಿಕ ನಾರಿನಂಶವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಕೆ ಮತ್ತು ಇ ಸಮೃದ್ಧವಾಗಿದ್ದು ಬೀಜಗಳು ಆಂಟಿ ಆ್ಯಕ್ಸಿಡೆಂಟ್ ಗುಣ ಹೊಂದಿವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಇದನ್ನು ಸ್ವಲ್ಪ ತಿನ್ನುವಾಗಲೇ ನಿಮ್ಮ ಹೊಟ್ಟೆ ತುಂಬಿದ ಅನುಭವ ಆಗುವುದರಿಂದ ದೇಹ ತೂಕ ಇಳಿಸಲು ಇದು ನೆರವಾಗುತ್ತದೆ. ಇದರಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ಕೊಬ್ಬು ಕರಗಿಸುವುದೂ ಸುಲಭ.
ಕುಂಬಳಕಾಯಿ ಬೀಜಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ. ಹೃದಯದ ಆರೋಗ್ಯವನ್ನು ಕಾಪಾಡಿ, ರಕ್ತದೊತ್ತಡ ನಿಯಂತ್ರಿಸುತ್ತದೆ. ಕೂದಲು ಉದುರುವುದನ್ನೂ ಕಡಿಮೆ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡಿ ಸುಖಕರ ನಿದ್ದೆ ನಿಮ್ಮದಾಗುವಂತೆ ನೋಡಿಕೊಳ್ಳುತ್ತದೆ.