ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 40,134 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಕೊರೊನಾ ಸೋಂಕು ಆರಂಭವಾದಾಗಿನಿಂದ ಆಕ್ಸಿಮೀಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಪರಿಶೀಲನೆ ಮಾಡಲಿಕ್ಕಿಸ್ಕೋರ ಇದನ್ನು ವ್ಯಾಪಕವಾಗಿ ಖರೀದಿ ಮಾಡಲಾಗ್ತಿದೆ.
ಆದರೆ ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆ ನಡೆಸಿದ ಅಧ್ಯಯನದಲ್ಲಿ ಆಕ್ಸಿಮೀಟರ್ಗಳ ಕುರಿತಾದ ಶಾಕಿಂಗ್ ಮಾಹಿತಿಯೊಂದು ಬಯಲಿದೆ ಬಂದಿದೆ.
ಈ ಅಧ್ಯಯನದಲ್ಲಿ ಆಕ್ಸಿಮೀಟರ್ಗಳು ಗಾಢ ಬಣ್ಣದ ವ್ಯಕ್ತಿಗಳಲ್ಲಿ ಸರಿಯಾದ ಆಮ್ಲಜನಕ ಮಟ್ಟವನ್ನು ತೋರಿಸೋದಿಲ್ಲ ಎಂದು ತಿಳಿದುಬಂದಿದೆ. ತಪ್ಪಾದ ಆಮ್ಲಜನಕ ಮಟ್ಟವನ್ನು ತೋರಿಸುವ ಕಾರಣದಿಂದಾಗಿ ಚಿಕಿತ್ಸೆ ನೀಡೋದ್ರಲ್ಲಿಯೂ ದೋಷ ಕಂಡುಬರ್ತಿದೆ. ಇದರಿಂದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂದು ಈ ಅಧ್ಯಯನ ಹೇಳಿದೆ.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಮಿಷಿಗನ್ ವಿಶ್ವವಿದ್ಯಾಲಯವು ಗಾಢ ಬಣ್ಣದ ವ್ಯಕ್ತಿಗಳಲ್ಲಿ ಆಕ್ಸಿಮೀಟರ್ ತಪ್ಪು ಆಮ್ಲಜನಕ ಪ್ರಮಾಣವನ್ನು ಸೂಚಿಸುತ್ತದೆ ಎಂದು ಪ್ರತಿಪಾದಿಸಿದೆ.
ನೀವು ಕಂದು ಇಲ್ಲವೇ ಕಪ್ಪು ಬಣ್ಣದ ವ್ಯಕ್ತಿಯಾಗಿದ್ದರೆ ಆಕ್ಸಿಮೀಟರ್ನಲ್ಲಿ ನಿಮ್ಮ ಆಮ್ಲಜನಕ ಮಟ್ಟವು ನಿಖರವಾಗಿ ತೋರಿಸೋದಿಲ್ಲ. ನಿಮ್ಮ ರಕ್ತದಲ್ಲಿರುವ ಆಕ್ಸಿಜನ್ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ಸೂಚ್ಯಂಕವು ಆಕ್ಸಿಮೀಟರ್ನಲ್ಲಿ ಗೋಚರವಾಗ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆ ಹೇಳಿದೆ.