ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು ಇದರಲ್ಲಿ ದೇಗುಲದ ಅರ್ಚಕರೊಬ್ಬರು ದೇವರ ಮೂರ್ತಿಯ ತಲೆ ಮೇಲೆ ಕಾಲಿಟ್ಟು ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಇದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಅರ್ಚಕ ಮಹೇಶ್ವರಯ್ಯ ಎಂಬವರು ಅಭಿಷೇಕ ಮಾಡುವ ವೇಳೆ ದೇವರ ಮೂರ್ತಿಯ ತಲೆ ಮೇಲೆ ತಮ್ಮ ಕಾಲನ್ನಿಟ್ಟಿದ್ದರೆ ಸಹಾಯಕ ಅವರ ಕಾಲಿನ ಮೇಲೆ ನೀರು ಸುರಿದಿದ್ದಾನೆ.
ಹೀಗೆ ಅರ್ಚಕ ಮಹೇಶ್ವರಯ್ಯ ಕಾಲಿನ ಮೇಲೆ ಸುರಿದ ನೀರು ದೇವರ ಮೂರ್ತಿಯ ತಲೆಯ ಮೇಲಿಂದ ಹರಿದು ಹೋಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ.