ಬೆಂಗಳೂರು: ದ್ವಿತೀಯ ಪಿಯುಸಿ ಮೂರು ಪರೀಕ್ಷೆಗಳ ಕ್ರೋಡೀಕೃತ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.
ವಿದ್ಯಾರ್ಥಿಗಳ ಅಂಕಗಳು ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಟಾಪರ್ ಪಟ್ಟಿಯನ್ನು ಕೂಡ ಪರಿಷ್ಕರಿಸಲಾಗಿದೆ. ವಿಜ್ಞಾನ ವಿಷಯದಲ್ಲಿ ಶೇಷಾದ್ರಿಪುರಂ ಸಂಯುಕ್ತ ಪಿಯು ಕಾಲೇಜಿನ ಪ್ರೀತಮ್ 599, ಧಾರವಾಡ ವಿದ್ಯಾನಿಕೇತನ ವಿಜ್ಞಾನ ಕಾಲೇಜಿನ ಎ. ವಿದ್ಯಾಲಕ್ಷ್ಮಿ 598 ಅಂಕ ಪಡೆದಿದ್ದಾರೆ. 11 ವಿದ್ಯಾರ್ಥಿಗಳು 597 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಉಡುಪಿಯ ಕಕ್ಕಂದೂರಿನ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ 598, ತುಮಕೂರಿನ ವಿದ್ಯಾ ಸ್ವತಂತ್ರ ಪಿಯು ಕಾಲೇಜಿನ ಜ್ಞಾನವಿ ರಾವ್ 597 ಅಂಕ ಗಳಿಸಿದ್ದು, ಎಂಟು ವಿದ್ಯಾರ್ಥಿಗಳು 596 ಅಂಕ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ವಿಜಯಪುರದ ಎಸ್.ಎಸ್. ಕಾಲೇಜಿನ ವೇದಾಂತ್, ಬೆಂಗಳೂರಿನ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಡಿ ಮೇಧಾ, ಕೂಡ್ಲಿಗಿಯ ಇಂದು ಸ್ವತಂತ್ರ ಪಿಯು ಕಾಲೇಜಿನ ಬಿ.ವಿ. ಕವಿತಾ ತಲಾ 596 ಅಂಕ ಗಳಿಸಿದ್ದಾರೆ.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ದೇವಾಂಶಿ ದಿನೇಶ ಅಮಿತಾ 595, ಧಾರವಾಡದ ಕೆಇಬಿ ಕಾಂಪೋಸಿಟ್ ಪಿಯು ಕಾಲೇಜಿನ ರವೀನಾ ಸೋಮಪ್ಪ ಲಮಾಣಿ 594 ಅಂಕ ಪಡೆದಿದ್ದಾರೆ.