alex Certify ಗುಡ್ ನ್ಯೂಸ್: PUC ಪಾಸಾದವರಿಗೆ 20 ಸಾವಿರ, ಪದವೀಧರರಿಗೆ 25, ಪಿಜಿ ಆದವರಿಗೆ 30 ಸಾವಿರ ರೂ. ಪ್ರೋತ್ಸಾಹಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: PUC ಪಾಸಾದವರಿಗೆ 20 ಸಾವಿರ, ಪದವೀಧರರಿಗೆ 25, ಪಿಜಿ ಆದವರಿಗೆ 30 ಸಾವಿರ ರೂ. ಪ್ರೋತ್ಸಾಹಧನ

ಮೈಸೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿನ(course completion year 2021) ಮೆಟ್ರಿಕ್ ನಂತರದ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ದ್ವಿತೀಯ ಪಿ.ಯು.ಸಿ ಅವರಿಗೆ ಪ್ರೋತ್ಸಾಹಧನ 20,000 ರೂ., ಸ್ನಾತಕ ಪದವಿ ಪ್ರೋತ್ಸಾಹಧನ 25,000 ರೂ, ಸ್ನಾತಕೋತ್ತರ ಪದವಿ ಪ್ರೋತ್ಸಾಹಧನ 30,000 ರೂ.ಗಳಾಗಿದ್ದು, ಅಭ್ಯರ್ಥಿಗಳು www.sw.kar.nic.in     ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ 4 ದಿನಗಳೊಳಗೆ ಡೌನ್‌ಲೋಡ್ ಮಾಡಿದ ಅರ್ಜಿಗಳನ್ನು ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜೆರಾಕ್ಸ್ ಪ್ರತಿ, ಮೂಲ ಅಂಕಪಟ್ಟಿ ಜೆರಾಕ್ಸ್ ಪ್ರತಿ(ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿ), ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಆನ್‌ಲೈನ್ ಮೂಲಕ ಸಲ್ಲಿಸಲಾದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಕಾಲೇಜು ಪ್ರಾಂಶುಪಾಲರ ಸಹಿ ಹಾಗೂ ಮೊಹರಿನೊಂದಿಗೆ ಅಕ್ಟೋಬರ್ 31 ರ ಒಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಿನಿ ವಿಧಾನ ಸೌಧ ಕೊಠಡಿ ಸಂಖ್ಯೆ:310 ತಿ.ನರಸೀಪುರ ತಾಲ್ಲೂಕು ಇಲ್ಲಿ ಸಲ್ಲಿಸಬಹುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...