ಶಿವಮೊಗ್ಗ: 2023 & 2024 ರಲ್ಲಿ 2ನೇ PUC(ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ) ಪಾಸ್ ಆಗಿರುವ ವಿದ್ಯಾರ್ಥಿಗಳು ಐಟಿ ಸೇವೆಗಳು ಮತ್ತು ಅಸೋಸಿಯೇಟ್ ಉದ್ಯೋಗದ ಪಾತ್ರಗಳಿಗಾಗಿ 12 ತಿಂಗಳ ತರಬೇತಿ ಜೊತೆಗೆ ಇಂಟರ್ನಶಿಪ್ ನೀಡಲಾಗುವುದು.
ಇದು ಒಟ್ಟಾರೆ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಿದ್ಧಗೊಳಿಸಲು ಅವರ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರ ಮೇಲೆ ಕೇಂದ್ರೀಕರಿಸುವ ಕಾರ್ಯಕ್ರಮವಾಗಿದೆ.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳು HCLTech ನಲ್ಲಿ ಉದ್ಯೋಗ ಪಡೆಯುತ್ತಾರೆ. ಕೆಲಸ ಮಾಡುವಾಗ ಅಭ್ಯರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು(Degree) IIIT, BITS Pilani, AMITY, KL ವಿಶ್ವವಿದ್ಯಾಲಯ ಅಥವಾ SASTRA ವಿಶ್ವವಿದ್ಯಾನಿಲಯದಲ್ಲಿ ಮುಂದುವರಿಸಲು ಆಯ್ಕೆಯನ್ನು ಹೊಂದಿರುತ್ತಾರೆ.
TechBee ಅಭ್ಯರ್ಥಿಗಳು ಇಂಟರ್ನ್‌ಶಿಪ್ ಸಮಯದಲ್ಲಿ ಪ್ರತಿ ತಿಂಗಳು 10,000 ರೂ. ಸ್ಟೈಫಂಡ್ ಗಳಿಸುತ್ತಾರೆ ಮತ್ತು HCLTech ನಿಂದ ಒಮ್ಮೆ ನೇಮಕಗೊಂಡ ನಂತರ ವಾರ್ಷಿಕ 1.70 – 2.20 ಲಕ್ಷ ರೂ. ನಡುವೆ ಸಂಬಳವನ್ನು ಗಳಿಸಲು ಪ್ರಾರಂಭಿಸುತ್ತಾರೆ.
ಕರ್ನಾಟಕದಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ದೊಂದಿಗೆ ಒಪ್ಪಂದ ಪ್ರಯುಕ್ತ ಕರ್ನಾಟಕದಲ್ಲಿ HCL TechBee ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
2023 & 2024 ರಲ್ಲಿ PUC 2ನೇ ವರ್ಷ ಪಾಸಾಗಿರುವವರು ಈಗಲೇ ಕೆಳಗಿನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಲಿಂಕ್- https://bit.ly/TechBeeKSDC
ಕಾರ್ಯಾಗಾರ ನಡೆಯುವ ಸ್ಥಳ : DVS Independent PU College ಶಿವಮೊಗ್ಗ.
ದಿನಾಂಕ : 15-06-2024
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8217478207 / 8722790340 / 9845454471