
ಬೆಂಗಳೂರು: 2021 -22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಏಪ್ರಿಲ್ 22 ರಿಂದ ಮೇ 18 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಅಲ್ಪ ಬದಲಾವಣೆಯೊಂದಿಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯನ್ನು ಎಲ್ಲ ಪೋಷಕರು, ವಿದ್ಯಾರ್ಥಿಗಳು ಇಲಾಖೆಯ ಅಂತರ್ಜಾಲದಲ್ಲಿ(https://pue.karnataka.gov.in/) ಗಮನಿಸಬಹುದಾಗಿದೆ.
ಮುಖ್ಯವಾಗಿ ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾಪಟ್ಟಿಯನ್ನು ಅನುಸರಿಸದೇ ಏಪ್ರಿಲ್ 6 ರಂದು ಪ್ರಕಟಿಸಲಾದ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಮಾತ್ರ ಎಚ್ಚರದಿಂದ ಅನುಸರಿಸಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಪರಿಷ್ಕೃತ ಅಂತಿಮ ವೇಳಾಪಟ್ಟಿ
ಏಪ್ರಿಲ್ 22 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏಪ್ರಿಲ್ 23 ಗಣಿತಶಾಸ್ತ್ರ, ಶಿಕ್ಷಣಶಾಸ್ತ್ರ
ಏಪ್ರಿಲ್ 25 ಅರ್ಥಶಾಸ್ತ್ರ
ಏಪ್ರಿಲ್ 26 ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
ಏಪ್ರಿಲ್ 27 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಏಪ್ರಿಲ್ 28 ಕನ್ನಡ, ಅರೇಬಿಕ್
ಮೇ 4 ಭೂಗೋಳ ಶಾಸ್ತ್ರ, ಜೀವಶಾಸ್ತ್ರ
ಮೇ 5 ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್
ಮೇ 6 ಇಂಗ್ಲಿಷ್
ಮೇ 10 ಇತಿಹಾಸ, ಭೌತಶಾಸ್ತ್ರ
ಮೇ 12 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14 ಸಮಾಜಶಾಸ್ತ್ರ, ಗಣಿತ ವಿಜ್ಞಾನ
ಮೇ 17 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹವಿಜ್ಞಾನ
ಮೇ 18 ಹಿಂದಿ
