
ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆಗಸ್ಟ್ 12 ರಿಂದ 25 ರವರೆಗೆ ನಡೆಯಲಿದ್ದು, ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಆಗಸ್ಟ್ 12 ಕನ್ನಡ ಮತ್ತು ಅರೇಬಿಕ್
ಆಗಸ್ಟ್ 13 ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ
ಆಗಸ್ಟ್ 16 ಹಿಂದಿ
ಆಗಸ್ಟ್ 17 ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲಗಣಿತ
ಆಗಸ್ಟ್ 18 ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
ಆಗಸ್ಟ್ 19 ರಾಜ್ಯಶಾಸ್ತ್ರ, ಗಣಿತಶಾಸ್ತ್ರ
ಆಗಸ್ಟ್ 20 ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ
ಆಗಸ್ಟ್ 22 ಇಂಗ್ಲಿಷ್
ಆಗಸ್ಟ್ 23 ಅರ್ಥಶಾಸ್ತ್ರ, ಜೀವಶಾಸ್ತ್ರ
ಆಗಸ್ಟ್ 24 ಇತಿಹಾಸ, ಸಂಖ್ಯಾಶಾಸ್ತ್ರ
ಆಗಸ್ಟ್ 25 ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಲಾಗಿದೆ.