ಧಾರವಾಡ: ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಧಾರವಾಡ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ವತಿಯಿಂದ https://admissioninfo.online/college/KARNATAKA/?cid=145 ಲಿಂಕ್ನ್ನು ಬಿಡುಗಡೆಗೊಳಿಸಲಾಗಿದೆ.
ವೃತ್ತಿ ಶಿಕ್ಷಣ ಕೋರ್ಸಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನೀಯರಿಂಗ್, ಕೃಷಿ ಇತರೆ ಪ್ರವೇಶ ಪಡೆಯಲು ಹಾಗೂ ಕಿತ್ತೂರರಾಣಿ ಚೆನ್ನಮ್ಮ ಪುರಸ್ಕಾರ, ಪ್ರತಿಭಾನ್ವಿತರಿಗೆ ಶುಲ್ಕ ಉಚಿತ(ಬೋಧನಾ ಶುಲ್ಕದ ವಿನಾಯತಿ), ಬೋಧನಾ ಶುಲ್ಕದ ವಿನಾಯತಿ ಯೋಜನೆ (Supernumerary Quota), ಡಾ. ಅಂಬೇಡ್ಕರ್ ರಾಷ್ಟ್ರೀಯ ಅರ್ಹತಾ ವಿದ್ಯಾರ್ಥಿ ವೇತನ ಪಿಯುಸಿ-2 ಪರಿಶಿಷ್ಟ ಜಾತಿ ವಿವಿಧ ಶಿಷ್ಯ ವೇತನ ಹಾಗೂ ಶುಲ್ಕ ವಿನಾಯತಿಗಳ ವಿವರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಲಿಂಕ್ ಬಿಡುಗಡೆ ಮಾಡಲಾಗಿದೆ.
2021ನೇ ಸಾಲಿನ ಆಗಸ್ಟ್ 28 ಮತ್ತು 29 ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ(KCET-2021) ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಾಚಾರ್ಯರ ವಾಟ್ಸಾಪ್ ಗ್ರೂಪ್ಗೆ ಕಳುಹಿಸಲಾಗಿದ್ದು, ಪ್ರಾಚಾರ್ಯರು ಎಲ್ಲ ವಿದ್ಯಾರ್ಥಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಧಾರವಾಡ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.