ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್) ಮೂಲಕ ಸುರಕ್ಷಿತವಾದ ಹೂಡಿಕೆಗೆ ನೋಡುತ್ತಿರುವ ಮಂದಿಗೆ ಸಾಕಷ್ಟು ಸಾಧ್ಯತೆಗಳಿವೆ.
ಪ್ರತಿನಿತ್ಯ 34 ರೂ.ನಂತೆ ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಸಾಗಿದರೆ, ಅದು ಮೆಚ್ಯೂರಿಟಿ ಅವಧಿಗೆ ಲಕ್ಷಾಂತರ ರೂಪಾಯಿಗಳಾಗುವ ಅವಕಾಶವೊಂದು ಇಲ್ಲಿದೆ.
ಪಿಪಿಎಫ್ ಠೇವಣಿಗಳ ಮೇಲೆ ಬೆಳೆಯುವ ಬಡ್ಡಿ ಮೇಲೆ ಆದಾಯ ತೆರಿಗೆ ವಿನಾಯಿತಿ ಸಹ ಇದೆ. 2020ರಿಂದ ಪಿಪಿಎಫ್ ಹೂಡಿಕೆಗಳ ಮೇಲೆ ಭಾರತ ಸರ್ಕಾರ 7.1% ಬಡ್ಡಿದರ ಕೊಡುತ್ತಿದೆ. ಸಾಮಾನ್ಯವಾಗಿ ಹೂಡಿಕೆ ಮಾಡಿದ 15 ವರ್ಷಗಳ ಬಳಿಕ ಪಿಪಿಎಫ್ ನಿಧಿ ಮೆಚ್ಯೂರ್ ಆಗುತ್ತದೆ.
SHOCKING: ಕಾಲಿಗೆ ಕಚ್ಚಿದ ಹಾವನ್ನೇ ಆಕ್ರೋಶದಿಂದ ಕಚ್ಚಿ ಕೊಂದ ಭೂಪ, ಅದೃಷ್ಟವಶಾತ್ ಪಾರು
ಹೀಗೆ ಮಾಸಿಕ 1000 ರೂ. ಗಳ ಹೂಡಿಕೆ ಮಾಡುತ್ತಾ ಸಾಗಿದರೆ 15 ವರ್ಷಗಳ ಬಳಿಕ ನಿಮ್ಮ ಪಿಪಿಎಫ್ ಖಾತೆಯಲ್ಲಿರುವ ಮೊತ್ತವು 3.25 ಲಕ್ಷ ರೂಪಾಯಿಗೆ ಬೆಳೆಯಲಿದೆ. ಇದರಲ್ಲಿ 1.8 ಲಕ್ಷ ನಿಮ್ಮ ಹೂಡಿಕೆಯಾದರೆ 1.45 ಲಕ್ಷ ರೂಪಾಯಿ ಆ ಹೂಡಿಕೆ ಮೇಲಿ ನಿಮಗೆ ಸಿಗುವ ಬಡ್ಡಿಯಾಗಲಿದೆ.
ಇದೇ ಸ್ಕೀಂ ಮೇಲೆ ಇನ್ನೂ ಹತ್ತು ವರ್ಷ ಹೂಡಿಕೆ ಮಾಡುವುದನ್ನು ಮುಂದುವರೆಸಿದರೆ ನಿಮ್ಮ ದುಡ್ಡು 12.36 ಲಕ್ಷ ರೂಪಾಯಿಗೆ ಬೆಳೆಯಲಿದೆ. ಮತ್ತೆ ಹತ್ತು ವರ್ಷದ ಕಾಲ ಇದೇ ದುಡ್ಡನ್ನು ಹೂಡಿಕೆ ಮಾಡಿಕೊಂಡು ಹೋದರೆ, ಅಂತಿಮವಾಗಿ, 35 ವರ್ಷಗಳ ಬಳಿಕ 18.15 ಲಕ್ಷ ರೂಪಾಯಿಗಳು ನಿಮ್ಮ ಖಾತೆಯಲ್ಲಿ ಮೆಚ್ಯೂರ್ ಆಗಿರಲಿದೆ.