alex Certify ಸಾರ್ವಜನಿಕರೇ ಗಮನಿಸಿ : ತ್ಯಾಜ್ಯವನ್ನು ಪುರಸಭೆ ವಾಹನಗಳಿಗೆ ನೀಡದಿದ್ದರೆ 200 ರೂ.ದಂಡ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ : ತ್ಯಾಜ್ಯವನ್ನು ಪುರಸಭೆ ವಾಹನಗಳಿಗೆ ನೀಡದಿದ್ದರೆ 200 ರೂ.ದಂಡ ಫಿಕ್ಸ್

ಬಳ್ಳಾರಿ : ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಮನೆ ಕಸವನ್ನು ಎಲ್ಲೆಂದರಲ್ಲಿ ಹಾಕದೇ ಕಡ್ಡಾಯವಾಗಿ ಪುರಸಭೆ ವಾಹನಗಳಿಗೆ ನೀಡಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ ಕೆ.ದುರುಗಣ್ಣ ಅವರು ತಿಳಿಸಿದ್ದಾರೆ.

ತಮ್ಮ ವಾರ್ಡ್ಗಳಿಗೆ ಬರುವ ಪುರಸಭೆ ವಾಹನಗಳಿಗೆ ಹಸಿಕಸ, ಒಣಕಸ, ಜೈವಿಕ ವೈದ್ಯಕೀಯ ತ್ಯಾಜ್ಯ ಮತ್ತು ಇ-ತ್ಯಾಜ್ಯವನ್ನು ಬೇರೆ ಬೇರೆ ಮಾಡಿ ನೀಡಬೇಕು. ತಪ್ಪಿದಲ್ಲಿ ಕಾನೂನಿನ್ವಯ ಮೊದಲ ಬಾರಿ ರೂ.100, ಎರಡನೇ ಬಾರಿ ರೂ.200ಗಳ ದಂಡವನ್ನು ವಿಧಿಸಲಾಗುವುದು ಮತ್ತು ಮೂರನೇ ಬಾರಿ ಪುನರಾವರ್ತನೆಯಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಾರ್ಡ್ ಮತ್ತು ವಾಹನ ಚಾಲಕರ ವಿವರ:

ವಾರ್ಡ್ ನಂ.14,17,18,19,20 ಗಳಿಗೆ ರಂಜಿತ್ ಕುಮಾರ್ (ಮೊ.7829638030), ವಾರ್ಡ್ ನಂ.21,22,23,8,9 ಗಳಿಗೆ ಕುಮಾರ ಸ್ವಾಮಿ (ಮೊ.8050435102), ವಾರ್ಡ್ ನಂ.5,12,6,16,7 ಗಳಿಗೆ ವಿನಾಯಕ (ಮೊ.8951784342), ವಾರ್ಡ್ ನಂ.1,13,2,3 ಗಳಿಗೆ ನರಸಿಂಹ (ಮೊ.7204138405), ವಾರ್ಡ್ ನಂ.4,10,15,11 ಗಳಿಗೆ ಪಾತಯ್ಯ (ಮೊ.8095708804) ಇವರಿಗೆ ಸಂಪರ್ಕಿಸಬಹುದು ಹಾಗೂ ಬೆಳಿಗ್ಗೆ 06 ಗಂಟೆಯಿಂದ 10 ಗಂಟೆಯವರೆಗೆ ತ್ಯಾಜ್ಯವಸ್ತು, ಕಸ ನೀಡಬಹುದಾಗಿದೆ.

ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ತಮ್ಮ ಮನೆಯಲ್ಲಿಯೇ ಗೊಬ್ಬರವನ್ನಾಗಿ ತಯಾರಿಸಿಕೊಂಡು ತಮ್ಮ ಮನೆ ಆವರಣದಲ್ಲಿರುವ ಗಿಡಗಳಿಗೆ ಹಾಕಬಹುದು. ಈ ರೀತಿ ಗೊಬ್ಬರವು ಪರಿಸರ ಸ್ನೇಹಿಯಾಗಿದ್ದು, ಗಿಡಗಳಿಗೂ ಸಹ ಉತ್ತಮ ಗೊಬ್ಬರವಾಗುತ್ತದೆ ಅಥವಾ ಮನೆಗಳಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಪ್ರತ್ಯೇಕವಾಗಿ ಪುರಸಭೆಯ ಹಳೆಬಸ್ ನಿಲ್ದಾಣದಲ್ಲಿರುವ ಆರ್.ಆರ್.ಆರ್. ಕೇಂದ್ರಗಳಿಗೆ ನೀಡಬಹುದು.
ಕಂಪ್ಲಿ ಪಟ್ಟಣವನ್ನು ಸ್ವಚ್ಛ ಪಟ್ಟಣವನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...