alex Certify ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಪತ್ತೆ; ಮತ್ತಲ್ಲೇ ಓಡಾಡುತ್ತಿದ್ದ ಯುವಕರನ್ನು ಹಿಡಿದ ಸ್ಥಳೀಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಪತ್ತೆ; ಮತ್ತಲ್ಲೇ ಓಡಾಡುತ್ತಿದ್ದ ಯುವಕರನ್ನು ಹಿಡಿದ ಸ್ಥಳೀಯರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಗಾಂಜಾ ಮತ್ತಲ್ಲಿ ಓಡಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮಾದಕ ವಸ್ತು ಸೇವಿಸಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಹಿಡಿದು ವಿಚಾರಿಸಿದಾಗ ಬ್ಯಾಗ್ ನಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ.

ರಸ್ತೆ ತುಂಬೆಲ್ಲಾ ಅಡ್ಡಾದಿಡ್ದಿಯಾಗಿ ಬೈಕ್ ಓಡಿಸುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಕಂಡು ಅನುಮಾನಗೊಂಡ ಸ್ಥಳೀಯರು ಬ್ಯಾಡರಹಳ್ಳಿ ಬಳಿ ವಿದ್ಯಾರ್ಥಿಗಳನ್ನು ಹಿಡಿದು ಪರಿಶೀಲಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ 1 ಕೆ.ಜಿ. ಗೂ ಅಧಿಕ ಗಾಂಜಾ ಪತ್ತೆಯಾಗಿದೆ.

ಜಗದಾದ್ಯಂತ ಪ್ರೇಮ ಸಂದೇಶ ಸಾರಲು ಸಜ್ಜಾಗುತ್ತಿದೆ ಈ ’ಲವರ್‌’ ಗ್ರಾಮ

ತಕ್ಷಣ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಅವರಿದ್ದ ಬಾಡಿಗೆ ಮನೆ ಪರಿಶೀಲಿಸಿದಾಗ ಪೌಡರ್ ರೂಪದ ಮಾದಕ ವಸ್ತುಗಳು ಪತ್ತೆಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...