alex Certify ಖಾಸಗಿ ಅಂಗದ ಕೂದಲು ತೆಗೆಯೋದು ಎಷ್ಟು ಸರಿ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಅಂಗದ ಕೂದಲು ತೆಗೆಯೋದು ಎಷ್ಟು ಸರಿ….?

ದೇಹದ ಇತರ ಭಾಗಗಳಂತೆ ಜನನಾಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರಿಗೆ ಇದ್ರ ಸ್ವಚ್ಛತೆ ಹಾಗೂ ಖಾಸಗಿ ಅಂಗದಲ್ಲಿ ಬೆಳೆಯುವ ಕೂದಲಿನ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.

ನಮ್ಮ ಸಮಾಜದಲ್ಲಿ ಇದ್ರ ಬಗ್ಗೆ ಮಹಿಳೆಯರಿಗೆ ಸರಿಯಾದ ಮಾಹಿತಿಯಿಲ್ಲ. ಮುಜುಗರದ ಹೆಸರಿನಲ್ಲಿ ಇದನ್ನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಇದ್ರಿಂದಾಗಿ ಅನೇಕ ಮಹಿಳೆಯರು ಲೈಂಗಿಕ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ.

ಖಾಸಗಿ ಅಂಗದಲ್ಲಿ ಬೆಳೆಯುವ ಅನಗತ್ಯ ಕೂದಲನ್ನು ತೆಗೆಯುವ ಬಗ್ಗೆ ಅನೇಕರಲ್ಲಿ ಗೊಂದಲವಿದೆ. ಅದನ್ನು ತೆಗೆಯುವುದು ಉತ್ತಮ. ಆದ್ರೆ ಶೇವ್ ಮಾಡುವ ವೇಳೆ ಎಚ್ಚರದಿಂದಿರಬೇಕು. ಅಲ್ಲಿನ ಚರ್ಮ ಸೂಕ್ಷ್ಮವಾಗಿರುತ್ತದೆ. ಅದಕ್ಕೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಅದಕ್ಕಾಗಿಯೇ ಇರುವ ರೇಜರ್, ಟ್ರಿಮ್ಮರ್ ಬಳಕೆ ಮಾಡಿದ್ರೆ ಭಯವಿಲ್ಲದೆ ಶೇವ್ ಮಾಡಬಹುದು.

ಈ ಕೂದಲಿನ ಬೆಳವಣಿಗೆ ಒಂದು ಸಮಯದ ನಂತ್ರ ನಿಲ್ಲುತ್ತದೆ. ಸ್ವಲ್ಪ ಸಮಯದ ನಂತರ ಅದು ಉದುರಿ ಹೋಗುತ್ತದೆ. ಹೊಸ ಕೂದಲು ಬೆಳೆಯಲು ಜಾಗವನ್ನು ನೀಡುತ್ತದೆ. ವ್ಯಾಕ್ಸಿಂಗ್ ನಂತರ ಕೂದಲಿನ ಪೂರ್ಣ ಬೆಳವಣಿಗೆಗೆ ಒಂದು ತಿಂಗಳು ಅಥವಾ ಸ್ವಲ್ಪ ಹೆಚ್ಚು ಸಮಯಬೇಕು. ಇದ್ರ ಬೆಳವಣಿಗೆ ಬೇರೆ ಬೇರೆಯವರಲ್ಲಿ ವಿಭಿನ್ನವಾಗಿರುತ್ತದೆ. ಸರಾಸರಿ ಈ ಬೆಳವಣಿಗೆ 2 ಇಂಚುಗಳಿಂದ 5 ಇಂಚುಗಳ ನಡುವೆ ಇರುತ್ತದೆ.

ಶೇವ್ ಮಾಡಿದ ನಂತ್ರ ಕೂದಲು ದಪ್ಪಗಾಗುತ್ತದೆ ಎಂಬ ನಂಬಿಕೆಯಿದೆ. ಆದ್ರೆ ಇದು ತಪ್ಪು.

ಈ ಕೂದಲಿಗೂ ಯೋನಿಗೂ ಯಾವುದೇ ಸಂಬಂಧವಿಲ್ಲ. ಕೂದಲು ಯೋನಿಯ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ಆದ್ರೆ ಶೇವ್ ಮಾಡಿದಾಗ ಯೋನಿ ದುರ್ಬಲಗೊಳ್ಳುತ್ತದೆ. ಕೆಲವೊಮ್ಮೆ ಅದರಲ್ಲಿರುವ ಬೆವರು ಯೋನಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಕೂದಲನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಶೇವ್ ಮಾಡುವುದಕ್ಕಿಂತ ಟ್ರಿಮ್ಮಿಂಗ್ ಉತ್ತಮ ಆಯ್ಕೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...