ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ 10 ಮಕ್ಕಳು ಒಂದೇ ರೀತಿ ಕೈ ಕೊಯ್ದುಕೊಂಡಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.
ಪಬ್ ಜೀ ರೀತಿಯ ಗೇಮ್ ಆಡಿ ಅವುಗಳ ಪ್ರೇರಣೆಯಿಂದ ಮಕ್ಕಳು ಈ ರೀತಿ ಕೈಕೊಯ್ದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕೈದು ದಿನಗಳ ಹಿಂದೆ ಘಟನೆ ನಡೆದಿದ್ದು, ಪೋಷಕರ ಗಮನಕ್ಕೆ ಬಂದಿರಲಿಲ್ಲ. ಕೆಲ ಮಕ್ಕಳ ಪೋಷಕರಿಗೆ ಈ ವಿಷಯ ತಿಳಿದು ಅವರು ಶಾಲೆಗೆ ಬಂದು ವಿಚಾರಿಸಿದ್ದಾರೆ.
ಪೋಷಕರ ಎದುರಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಒಬ್ಬೊಬ್ಬರು ಒಂದೊಂದು ರೀತಿ ಹೇಳಿದ್ದಾರೆ. ಕೆಲವರು ಹೂ ಕೀಳುವಾಗ ಮುಳ್ಳು ತಗುಲಿದೆ ಎಂದರೆ ಮತ್ತೆ ಕೆಲವರು ಸ್ನೇಹಿತೆ ಕೈಕೊಯ್ದುಕೊಂಡಿದ್ದರಿಂದ ನಾನು ಕೂಡ ಅದೇ ರೀತಿ ಮಾಡಿಕೊಂಡೇ ಎಂದು ಹೇಳಿದ್ದಾರೆ. ಹೀಗೆ ಮಕ್ಕಳು ಬೇರೆ ಬೇರೆ ಕಾರಣ ನೀಡಿದ್ದು, ಶಿಕ್ಷಕರು ಮಕ್ಕಳಿಗೆ ಬುದ್ಧಿವಾದ ಹೇಳಿದ್ದಾರೆ.