
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಲುಕಿನ ಫರಂಗಿಪೇಟೆಯಲ್ಲಿ ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿ ದಿಗಂತ್ ಪತ್ತೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಭಜರಂಗದಳ ಮುಖಂಡನಿಗೆ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ ನದೆಸಿದ ಬಳಿಕ ಭಜರಂಗ ದಳ ಮುಖಂಡ ಭರತ್ ಕುಮ್ಡೇಲ್ ಅವರಿಗೆ ಜೀವಬೆದರಿಕೆ ಹಾಕಲಾಗುತ್ತಿದೆ. ಭರ್ತ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆ ಬೆದರಿಕೆ ಬರುತ್ತಿದೆಯಂತೆ.
BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಪೇಜ್ ಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದೆ. ದಿಗಂತ್ ನಾಪತ್ತೆ ಹಿಂದೆ ಗಂಜಾ ಗ್ಯಾಂಗ್ ಕೈವಡವಿದೆ ಎಂದು ಭರತ್ ಆರೋಪಿಸಿದ್ದರು. ಇದೀಗ ದಿಗಂತ್ ಪತ್ತೆಯಾಗಿದ್ದು, ಪತ್ತೆಯಾದ ಬೆನ್ನಲ್ಲೇ ಭರತ್ ಕುಮ್ಡೇಲ್ ಗೆ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.