ಹೂವಿನ ಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ. ಶಿವಾಜಿ ನಾಯ್ಕ್ ಕ್ಷುಲ್ಲಕ ಕಾರಣಕ್ಕೆ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾರೆ.
ವಿಜಯನಗರ ಜಿಲ್ಲೆ ಲಕ್ಷ್ಮೀಪುರ ಗ್ರಾಮದ ನಿವಾಸಿ ಶರಣ್ ನಾಯ್ಕ್ ಎಂಬವವವರ ಮೇಲೆ ಕಬ್ಬಿಣದ ಹಾರೆಯಿಂದ ಶಿವಾಜಿನಾಯ್ಕ್ ಹಲ್ಲೆ ನಡೆಸಿದ್ದಾರೆ.
ಮನೆಯ ಜಾಗದ ವಿಚಾರವಾಗಿ ಶುರುವಾದ ಜಗಳವು ಹಲ್ಲೆ ನಡೆಸುವಷ್ಟರ ಮಟ್ಟಿಗೆ ಹೋಗಿದೆ ಎನ್ನಲಾಗಿದೆ. ಮಹಿಳೆಯರು ಹಾಗೂ ವೃದ್ಧರ ಎದುರು ಅಶ್ಲೀಲ ಪದ ಬಳಕೆ ಮಾಡಿದ ಶಿವಾಜಿ ನಾಯ್ಕ್, ಬಳಿಕ ಹಾರೆಯಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಶರಣ ನಾಯಕ್ರನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಾಜಿ ನಾಯ್ಕ್ ವೃದ್ಧನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ .