ಚಿಕ್ಕಮಗಳೂರು: ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಕಳಸ ಠಾಣೆ ಪಿಎಸ್ಐ ನಿತ್ಯಾನಂದ ಗೌಡ ಅವರನ್ನು ಅಮಾನತು ಮಾಡಲಾಗಿದೆ.
ನಿತ್ಯಾನಂದ ಗೌಡ ಅವರ ವಿರುದ್ಧ ಪತ್ನಿ ಅಮಿತಾ ವರದಕ್ಷಿಣೆ ಕಿರುಕುಳ ಕುರಿತಾಗಿ ದೂರು ನೀಡಿದ್ದರು. ಜನವರಿ 17ರಂದು ಪತ್ನಿ ಅಮಿತಾ ಅವರ ಮೇಲೆ ಪಿಎಸ್ಐ ನಿತ್ಯಾನಂದ ಗೌಡ ಹಲ್ಲೆ ನಡೆಸಿ ರೂಮಿನಿಂದ ಹೊರ ಹಾಕಿದ್ದರು. 50 ಲಕ್ಷ ವಾರದ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತ್ನಿ ದೂರು ನೀಡಿದ್ದರು.
ಅಲ್ಲದೆ ದೂರು ನೀಡಲು ಬಂದ ಹೆಣ್ಣು ಮಕ್ಕಳ ಜೊತೆಗೆ ಅಸಭ್ಯವಾಗಿ ವರ್ತಿಸುವುದು, ಪಾಸ್ಪೋರ್ಟ್ ಮಾಡಿಸಲು ಬರುವ ಮಹಿಳೆಯರನ್ನು ಲೈಂಗಿಕ ಸಂಪರ್ಕಕ್ಕೆ ಕರೆಯುವ ಆರೋಪ ನಿತ್ಯಾನಂದ ಗೌಡ ಅವರ ಮೇಲಿದೆ. ಈ ಹಿಂದೆ ಕಾಪು ಠಾಣೆಯಲ್ಲಿದ್ದಾಗ ಮಹಿಳೆ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಕೋಟಾ ಬ್ರಹ್ಮಾವರ ಠಾಣೆಯಲ್ಲಿ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ದೈಹಿಕ ಸಂಬಂಧ ಬೆಳೆಸಿದ್ದರ ಬಗ್ಗೆ ನಿತ್ಯಾನಂದ ಗೌಡ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಐಜಿಪಿ ಅಮಿತ್ ಸಿಂಗ್ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.