ಬೆಂಗಳೂರು: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಭ್ಯರ್ಥಿಯ ವಿಚಾರಣೆಯಲ್ಲಿ ಸ್ಫೋಟಕ ಸತ್ಯ ಬಯಲಾಗಿದೆ.
ಸಿಐಡಿ ವಿಚಾರಣೆಯಲ್ಲಿ ಪ್ರಭಾವಿ ಮಂತ್ರಿಯೊಬ್ಬರ ಕೈವಾಡ ಇರುವುದು ಗೊತ್ತಾಗಿದೆ. ಮಂತ್ರಿಯೊಬ್ಬರ ತಮ್ಮನಿಗೆ 80 ಲಕ್ಷ ನೀಡಿದ ಬಗ್ಗೆ ನೇಮಕಾತಿಯಲ್ಲಿ 4 ನೇ ರ್ಯಾಂಕ್ ಪಡೆದಿದ್ದ ದರ್ಶನ್ ಗೌಡ ಮಾಹಿತಿ ನೀಡಿದ್ದಾನೆ. ತಕ್ಷಣ ಸಿಐಡಿ ಅಧಿಕಾರಿಗೆ ಕರೆಮಾಡಿದ ಪ್ರಭಾವಿ ಸಚಿವ ಯಾವುದೇ ಕಾರಣಕ್ಕೂ ನನ್ನ ತಮ್ಮನನ್ನು ವಿಚಾರಣೆ ಮಾಡಬೇಡಿ ವಿಚಾರಣೆ ಮಾಡದೆ ಬಿಟ್ಟು ಕಳುಹಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ನಂತರ ದರ್ಶನ್ ಗೌಡನನ್ನು ಬಿಟ್ಟು ಕಳುಹಿಸಲಾಗಿದೆ. ಓಎಂಆರ್ ಶೀಟ್ ನಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ದರ್ಶನ್ ಗೌಡ ಸೇರಿದಂತೆ ಅನೇಕ ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆ ವೇಳೆ ಸಚಿವರ ತಮ್ಮನಿಗೆ 80 ಲಕ್ಷ ರೂಪಾಯಿ ನೀಡಿರುವುದಾಗಿ ದರ್ಶನ್ ಗೌಡ ಹೇಳಿದ್ದಾನೆ. ಪಿಎಸ್ಐ ಪರೀಕ್ಷೆಯಲ್ಲಿ ದರ್ಶನ್ ಗೌಡ 4ನೇ ರ್ಯಾಂಕ್ ಪಡೆದುಕೊಂಡಿದ್ದಾನೆ.
ಈತನ ವಿಚಾರಣೆಯಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗಿದೆ. ಪ್ರಭಾವಿ ಮಂತ್ರಿಯೊಬ್ಬರ ಹೆಸರು ಬಯಲಾಗಿದೆ ಮಂತ್ರಿಯ ತಮ್ಮನಿಗೆ 80 ಲಕ್ಷ ರೂಪಾಯಿ ನೀಡಿರುವುದಾಗಿ ಅಭ್ಯರ್ಥಿ ದರ್ಶನ್ ಗೌಡ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆನ್ನಲಾಗಿದ್ದು, ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.