
ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ಗಳಲ್ಲಿನ ಅಕ್ರಮ ಬಹಿರಂಗವಾಗಿದೆ.
ಎಫ್ಎಸ್ಎಲ್ ನಿಂದ ಅಭ್ಯರ್ಥಿಗಳ ಅಕ್ರಮ ಬಟಾಬಯಲಾಗಿದೆ. ಬೆಂಗಳೂರಿನಲ್ಲಿ 27 ಅಭ್ಯರ್ಥಿಗಳ ಮೇಲೆ ಎಫ್ಐಆರ್ ದಾಖಲಾಗಿತ್ತು. ಒಎಂಆರ್ ಶೀಟ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಎಫ್ಎಸ್ಎಲ್ ವರದಿಯನ್ನು ಸಿಐಡಿಗೆ ನೀಡಲಾಗಿದೆ. ಎಫ್ಎಸ್ಎಲ್ ವರದಿಯಿಂದ ಎಲ್ಲಾ 27 ಅಭ್ಯರ್ಥಿಗಳ ಅಕ್ರಮ ಬಹಿರಂಗಗೊಂಡಿದೆ. ಇಂದು ಎಫ್ಎಸ್ಎಲ್ ವರದಿಯನ್ನು ಸಿಐಡಿ ಅಧಿಕಾರಿಗಳು ಹೈಕೋರ್ಟ್ ಗೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.