ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಗಳ ಜೊತೆ ಸಂಪರ್ಕ ಹೊಂದಿದ್ದವರಿಗೆ ಸಂಕಷ್ಟ ಶುರುವಾಗಿದೆ.
ಕಿಂಗ್ ಪಿನ್ ಗಳ ಜೊತೆ ಸಂಪರ್ಕ ಹೊಂದಿರುವವರ ವಿಚಾರಣೆ ನಡೆಸಲಾಗಿದೆ. ಕಲಬುರಗಿ ಬಿಜೆಪಿ ಮುಖಂಡರಾದ ದಿವ್ಯಾ ಹಾಗರಿಗಿ ಜೊತೆ ಸಂಪರ್ಕದಲ್ಲಿದ್ದವರ ವಿಚಾರಣೆ ನಡೆಸಲಾಗಿದೆ. ಬೇರೆ ಬೇರೆ ಸ್ಥಳಗಳಿಗೆ ಕರೆದು ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪರೀಕ್ಷಾ ಅಕ್ರಮ, ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಅಕ್ರಮದಲ್ಲಿ ಭಾಗಿಯಾಗಿದ್ದ ಮತ್ತು ತಲೆಮರೆಸಿಕೊಳ್ಳಲು ನೆರವಾಗಿದ್ದವರಿಗೆ ಸಂಕಷ್ಟ ಎದುರಾಗಿದೆ. ಆರೋಪಿಗಳು ಪರಾರಿಯಾಗಲು ನೆರವು ನೀಡಿದ ಕೆಲವರನ್ನು ಬಂಧಿಸಲಾಗಿದೆ. ಸಿಐಡಿ ಪೊಲೀಸರು ಆರೋಪಿಗಳಿಗೆ ನೆರವು ನೀಡಿದ್ದ ಕೆಲವರನ್ನು ಬಂಧಿಸಿದ್ದಾರೆ. ಅಲ್ಲದೇ, ನಾಪತ್ತೆಯಾಗಿರುವ ದಿವ್ಯ ಹಾಗರಗಿ ಮತ್ತು ತಂಡದವರ ಬಂಧನಕ್ಕೆ ಸಿಐಡಿ ಶೋಧ ಕಾರ್ಯ ಕೈಗೊಂಡಿದೆ. ಪತ್ತೆಗಾಗಿ ಕಾಶ್ಮೀರದವರೆಗೂ ಪೊಲೀಸರು ತೆರಳಿದ್ದು, ಈಶಾನ್ಯ ರಾಜ್ಯಗಳತ್ತ ತೆರಳಿದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಅಲ್ಲಿಯೂ ಮಾಹಿತಿ ಕಲೆಹಾಕಲಾಗಿದೆ ಎನ್ನಲಾಗಿದೆ.