ಬೆಳಗಾವಿ: ಪಿಎಸ್ಐ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರದ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಧಿವೇಶನ ಮುಗಿದ ಬಳಿಕ ಆದೇಶ ಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಈ ಹಿಂದೆ 545 ಪಿಎಸ್ ಐ ನೇಮಕಾತಿಯಲ್ಲಿ ಹಗರಣ ನಡೆದಿತ್ತು. ಮರುಪರೀಕ್ಷೆ ಮಾಡಿ ಈಗ ವೆರಿಫಿಕೇಷನ್ ಮಾಡಲಾಗುತ್ತಿದೆ. ಅಧಿವೇಶನದ ಬಳಿಕ ಆಯ್ಕೆಯಾದ ಪಿಎಸ್ಐಗಳಿಗೆ ಆದೇಶ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಹೊಸದಾಗಿ ಇನ್ನೂ 402 ಪಿಎಸ್ಐ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎದು ಇದೇ ವೇಳೆ ತಿಳಿಸಿದರು.
ಇನ್ನು ಹಿಂಡಲಗಾ ಜೈಲಿನ ಕೈದಿಗಳ ಮದ್ಯ ಸೇವನೆ ವಿಡಿಯೋ ವೈರಲ್ ಪ್ರಕರಣಕ್ಕೆ ದ್ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದು 2022ರ ವಿಡಿಯೋ. ಅದನ್ನು ಈಗ ಮತ್ತೆ ಹಾಕಿದ್ದಾರೆ. ಜೈಲುಗಳಲ್ಲಿ 5ಜಿ ಜಾಮರ್ ಹಾಕಲಾಗುತ್ತದೆ ಎಂದು ಹೇಳಿದರು.