alex Certify PSI ಹುದ್ದೆಗೆ ಅಕ್ಟೋಬರ್ 3ರಂದು ಪರೀಕ್ಷೆ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PSI ಹುದ್ದೆಗೆ ಅಕ್ಟೋಬರ್ 3ರಂದು ಪರೀಕ್ಷೆ ನಿಗದಿ

ಬೆಂಗಳೂರು: 402 ಪಿಎಸ್ಐ ಹುದ್ದೆ ನೇಮಕಾತಿಗೆ ಮುಂದೂಡಿಕೆಯಾಗಿದ್ದ ಪರೀಕ್ಷೆ ದಿನಾಂಕ ನಿಗದಿ ಮಾಡಿ ಕೆಇಎ ಆದೇಶ ಹೊರಡಿಸಿದೆ.

ಅಕ್ಟೊಬರ್ 3ರಂದು ಪಿಎಸ್ಐ ನೇಮಕಾತಿ ಪರೀಕ್ಷೆ ನಡೆಸಲು ಕರ್ನಟಕಾ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ. ಅ.3ರಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ.

ಮಾಧ್ಯಹ್ನ 12:30ರಿಂದ 2:00ಗಂಟೆಯವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ.

ಇನ್ನು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಜಿಟಿಟಿಸಿಯ ವಿವಿಧ ಹುದ್ದೆಗಳ ಪರೀಕ್ಷೆ ಸೆ.29 ಹಾಗೂ ಅ.26ರಂದು ಹಾಗೂ ಗ್ರಾಮ ಆಡಳಿತಾಧಿಕರಿ ಹುದ್ದೆಗೆ ಅ.7ರಂದು ಪರೀಕ್ಷೆ ನಡೆಯಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...