
ಟ್ರ್ಯಾಕ್ಟರ್ ನಲ್ಲಿ ಜೋರಾಗಿ ಹಾಡು ಹಾಕಿದ್ದಕ್ಕೆ ಪಿಎಸ್ಐ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪಿಎಸ್ಐ ಮತ್ತು ಟ್ರ್ಯಾಕ್ಟರ್ ಚಾಲಕನ ಮಧ್ಯೆ ವಾಗ್ವಾದ ನಡೆದಿದ್ದು, ಟ್ರ್ಯಾಕ್ಟರ್ ಚಾಲಕನ ಮೇಲೆ ಪಿಎಸ್ಐ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಸಂದೀಪ್ ಎಂಬುವವರ ತಲೆಗೆ ರಕ್ತ ಬರುವ ರೀತಿಯಲ್ಲಿ ಪಿಎಸ್ಐ ಭೀಮಶಿ ಹಲ್ಲೆ ಮಾಡಿದ್ದಾರೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮಾಲಗಿ ಕ್ರಾಸ್ ಬಳಿ ಘಟನೆ ನಡೆದಿದೆ.
ಕೆರೂರು ಪೋಲಿಸ್ ಠಾಣೆಯ ಪಿಎಸ್ಐ ಭೀಮಶಿ ಅವರು ಹಲ್ಲೆ ಮಾಡಿದ್ದಾರೆ ಎಂದು ಸಂದೀಪ ಗುಂಟನೂರು ಎಂಬ ಆರೋಪಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆಯಲ್ಲಿ ಸಂದೀಪ್ ಗುರುತಿಸಿಕೊಂಡಿದ್ದರು. ಹಿಂದೂ ಸಂಘಟನೆ ಗುರುತಿಸಿಕೊಂಡಿದ್ದರ ಬಗ್ಗೆಯೂ ಪ್ರಸ್ತಾಪಿಸಿ ಹಲ್ಲೆ ಮಾಡಿದ್ದಾರೆ. ಕುಟುಂಬದವರಿಗೂ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಸಂದೀಪ್ ಆರೋಪಿಸಿದ್ದಾರೆ. ಗಾಯಾಳು ಸಂದೀಪ್ ನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.