ಕಲಬುರ್ಗಿ: 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಆರ್.ಡಿ. ಪಾಟೀಲ್, ಅಫಜಲ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಸಹೋದರನಾಗಿದ್ದು, ಪ್ರಕರಣದ ಕಿಂಗ್ ಪಿನ್ ಎಂದು ಹೇಳಲಾಗುತ್ತಿದೆ.
BIG NEWS: ರಾಜ್ಯ ರಾಜಧಾನಿಯಲ್ಲಿ 2 ಹೊಸ ರೂಪಾಂತರಿ ವೈರಸ್ ಪತ್ತೆ; 3 ವಾರಗಳಲ್ಲಿ ಕೋವಿಡ್ 4ನೇ ಅಲೆ ಅಪ್ಪಳಿಸುವ ಭೀತಿ; ಎಚ್ಚರಿಕೆ ನೀಡಿದ ಡಾ.ಸಿ.ಎನ್.ಮಂಜುನಾಥ್
ಆರ್.ಡಿ. ಪಾಟೀಲ್ ಪಿಎಸ್ಐ ನೇಮಕಾತಿ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಆನ್ಸರ್ ಕೀ ರವಾನಿಸಿದ್ದ ಎನ್ನಲಾಗಿದೆ. ಅಲ್ಲದೇ ಈ ಹಿಂದೆ ನಡೆದಿದ್ದ ಕೆಎಎಸ್, ಎಫ್ ಡಿಎ, ಎಸ್ ಡಿ ಎ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ವಾಮಮಾರ್ಗದ ಮೂಲಕ ಹಲವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸಿದ್ದ ಎಂದು ತಿಳಿದುಬಂದಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್, ಸಹೋದರ ಆರ್.ಡಿ.ಪಾಟೀಲ್ ಪ್ರಮುಖ ಆರೋಪಿಗಳೆನ್ನಲಾಗುತ್ತಿದ್ದು, ಮತ್ತೋರ್ವ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದು, ಶೋಧ ನಡೆಸಲಾಗುತ್ತಿದೆ.