ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ನಾರಾಯಣ ಸಿ.ಎಂ. ಎಂದು ತಿಳಿದು ಬಂದಿದೆ. ನಾರಾಯಣ ಸಿ.ಎಂ ಹಾಗೂ ಆತನ ಸಹೋದರ ಇಬ್ಬರೂ ಪಿಎಸ್ಐ ಆಗಿ ಆಯ್ಕೆಯಾಗಿದ್ದರು. ಕಗ್ಗಲಿಪುರದ ಚಿಕ್ಕಗುರ್ತಿ ಗ್ರಾಮದ ನಿವಾಸಿಗಳಾಗಿರುವ ಸಹೋದರರು ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದರು. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಹೋದರರಿಬ್ಬರು ಎಫ್.ಎಸ್.ಎಲ್. ವರದಿಯಲ್ಲಿ ಒಎಂಆರ್ ಶೀಟ್ ತಿದ್ದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಇದೀಗ ನಾರಾಯಣ ಸಿ.ಎಂನನ್ನು ಬಂಧಿಸಲಾಗಿದೆ.