ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟವರ ಅಂಕಿಅಂಶಗಳನ್ನು ಒದಗಿಸಲು ಕೋರಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.
ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕೆ.ಸಿ. ವೇಣುಗೋಪಾಲ್ ಕಳೆದ ವಾರ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ, ಆಮ್ಲಜನಕದ ಕೊರತೆಯಿಂದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದಕ್ಕೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಯಾವುದೇ ದತ್ತಾಂಶ ಸಿಕ್ಕಿಲ್ಲ ಎಂದಿದೆ.
ʼಪದ್ಮʼ ಪ್ರಶಸ್ತಿಗೆ ವೈದ್ಯರು, ಆರೋಗ್ಯ ಕಾರ್ಯಕರ್ತರ ಹೆಸರು ಶಿಫಾರಸ್ಸು ಮಾಡಲು ಮುಂದಾದ ದೆಹಲಿ ಸರ್ಕಾರ
ದೇಶಾದ್ಯಂತ ಆಮ್ಲಜನಕದ ಕೊರತೆಯಿಂದ ಬಹಳಷ್ಟು ಜನರು ಮೃತಪಟ್ಟಿದ್ದಾರೆ ಎಂದ ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್, “ಆಮ್ಲಜನಕದ ಕೊರತೆ ಇಲ್ಲದೇ ಇದ್ದಿದ್ದರೆ ಆಸ್ಪತ್ರೆಗಳೇಕೆ ಕೋರ್ಟ್ ಮೆಟ್ಟಿಲೇರುತ್ತಿದ್ದವು ? ಆಮ್ಲಜನಕದ ಕೊರತೆ ಬಗ್ಗೆ ಆಸ್ಪತ್ರೆಗಳು ಹಾಗೂ ಮಾಧ್ಯಮಗಳು ಪ್ರತಿನಿತ್ಯ ಮಾತನಾಡುತ್ತಲೇ ಇವೆ. ಆಮ್ಲಜನಕದ ಕೊರತೆಯಿಂದ ಯಾರೊಬ್ಬರೂ ಮೃತಪಟ್ಟಿಲ್ಲ ಎಂದು ಹೇಳುವುದು ಶುದ್ಧ ಸುಳ್ಳು. ಆಮ್ಲಜನಕದ ಕೊರತೆಯಿಂದ ದೆಹಲಿ ಹಾಗೂ ದೇಶದ ಇತರೆಡೆಗಳಲ್ಲಿ ಬಹಳಷ್ಟು ಮಂದಿ ಮೃತಪಟ್ಟಿದ್ದಾರೆ” ಎಂದು ಹೇಳಿದ್ದಾರೆ.