ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿವಿಧ ಲಾಡ್ಜ್ ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಡಿವೈಎಸ್ಪಿ ಶಾಂತವೀರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 10 ಯುವತಿಯರನ್ನು ರಕ್ಷಿಸಲಾಗಿದೆ. ಮುಧೋಳದ ಓಂಕಾರ, ಸಪ್ತಗಿರಿ, ಶಿವದುರ್ಗ, ಸುರಭಿ ಹೆಸರಿನ ಲಾಡ್ಜ್ ಗಳ ಮೇಲೆ ದಾಳಿ ನಡೆಸಲಾಗಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮುಂಬೈ, ಅಸ್ಸಾಂ ಮೂಲದ ಯುವತಿಯರನ್ನು ರಕ್ಷಿಸಲಾಗಿದೆ.
ಶಿವಕುಮಾರ, ನಿರಂಜನ ಪೂಜಾರಿ, ಶ್ರೀಕಾಂತ್, ಚಂದು ಕಲಾಲ, ಹಣಮಂತ ಮಾರುತಿ ಭಜಂತ್ರಿ, ಲಮಿತ್ ಮೇತ್ರಿ, ಆನಂದ ಸೇರಿ 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.