ಬೆಂಗಳೂರು: ಸ್ಪಾ ಹೆಸರಲ್ಲಿ ನಡೆಸಲಾಗುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ವೈಟ್ಫೀಲ್ಡ್ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಆರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಸ್ಪಾ ಮ್ಯಾನೇಜರ್ ನವೀನ್(26), ಸಹಾಯಕ ಭರತ್ ಸಿಂಗ್(27) ಬಂಧಿತರು. ಬಂಧಿತರಿಂದ 3000 ರೂ. ನಗದು, ಮೊಬೈಲ್ ಸೇರಿ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಸ್ಪಾ ಮಾಲೀಕ ಭೀಮಾನಾಯಕ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಾರತಹಳ್ಳಿಯ ಹೊರ ವರ್ತುಲ ರಸ್ತೆಯ ಲಕ್ಷದೀಪ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಹೊರ ರಾಜ್ಯದ ಹುಡುಗಿಯರನ್ನು ಕರೆತಂದು ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ವೈಟ್ ಫೀಲ್ಡ್ ಪೊಲೀಸರು ದಾಳಿ ನಡೆಸಿದ್ದಾರೆ. ದೆಹಲಿ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಥೈಲ್ಯಾಂಡ್ ಮೂಲದ ಆರು ಮಹಿಳೆಯರನ್ನು ರಕ್ಷಿಸಲಾಗಿದೆ. ಹೆಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.