ಚಿಕ್ಕಮಗಳೂರು: ಹಣಕ್ಕಾಗಿ ಹೆತ್ತ ತಾಯಿಯೇ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಚಿಕ್ಕಮಗಳೂರು ವಿಶೇಷ ಕೋರ್ಟ್ ಬಾಲಕಿಯ ತಾಯಿ ಸೇರಿ ನಾಲ್ವರು ದೋಷಿಗಳು ಎಂದು ತೀರ್ಪು ಪ್ರಕಟಿಸಿದೆ.
ಚಿಕ್ಕಮಗಳೂರಿನ ತ್ವರಿತ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದ್ದು, 53 ಜನರ ಪೈಕಿ 49 ಜನರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ನಾಲ್ವರನ್ನು ದೋಷಿಗಳು ಎಂದು ಕೋರ್ಟ್ ತಿಳಿಸಿದೆ.
ಈ ಮೂಲಕ ಸಲ್ಮಾನ್ ಅಭಿ, ಸಂತ್ರಸ್ತೆ ತಾಯಿ ಗೀತಾ, ಗಿರೀಶ್, ದೇವಿ ಶರಣ್, ಅಪರಾಧಿಗಳು ಎಂದು ಸಾಬೀತಾಗಿದ್ದು, ಮಾರ್ಚ್ 11ರಂದು ನಾಲ್ಕು ಆರೋಪಿಗಳ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುವುದು.
ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ನೂಕಿದ್ದ ತಾಯಿ ಗೀತಾಗೆ ಸಲ್ಮಾ ಅಭಿ, ಗಿರೀಶ್, ದೇವಿ ಶರಣ್ ಎನ್ನುವವರು ಸಹಾಯ ಮಾಡಿದ್ದರು. ತಾಯಿಯ ಕಿರುಕುಳ, ಹಿಂಸೆಗೆ ಬಾಲಕಿ ವೇಶ್ಯಾವಾಟಿಕೆ ಒಪ್ಪಿದ್ದಳು. 2020ರ ಸೆಪ್ಟೆಂಬರ್ 1 ರಿಂದ 2021ರ ಜನವರಿ 27ವರೆಗೆ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆದಿತ್ತು. ಶೃಂಗೇರಿ ತಾಲೂಕಿನ ಕುಂಚೆಬೈಲ್ ಬಳಿಯ ಗೋಚವಲ್ಲಿ ಗ್ರಾಮದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಖಚಿತ್ತ ಮಾಹಿತಿ ಪಡೆದ ಪೊಲೀಸರು 2021ರಲ್ಲಿ ದಾಳಿ ನಡೆಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದರು. ಪ್ರಕರಣ ಸಂಬಂಧ 53 ಜನರನ್ನು ಬಂಧಿಸಿದ್ದರು.