ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಪಾವತಿಯ ವಿಧವಾಗಿ ಬಳಸದಂತೆ ನಿಷೇಧಿಸುವ ಸಂಬಂಧ ಪ್ರಸ್ತಾಪಿಸಲಾದ ಮಸೂದೆಯಲ್ಲಿ; ಈ ಸಂಬಂಧ ಕಾನೂನಿನ ಉಲ್ಲಂಘನೆ ಮಾಡುವವರಿಗೆ ವಾರೆಂಟ್ ಹಾಗೂ ಜಾಮೀನು ಇಲ್ಲದೇ ಜೈಲಿಗಟ್ಟಬಹುದಾದ ಸಾಧ್ಯತೆಯನ್ನು ಒಳಗೊಂಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಬಹುತೇಕ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವುದಾಗಿ ಈ ಹಿಂದೆ ತಿಳಿಸಿತ್ತು. ಇದೇ ಸೆಪ್ಟೆಂಬರ್‌ನಲ್ಲಿ, ಕ್ರಿಪ್ಟೋಕರೆನ್ಸಿಗಳ ವಿರುದ್ಧ ವ್ಯಾಪಕವಾಗಿ ಚೀನಾ ತೆಗೆದುಕೊಂಡಿದ್ದ ಕ್ರಮಗಳನ್ನೇ ಭಾರತವೂ ತೆಗೆದುಕೊಳ್ಳುವಂತೆ ಕಾಣುತ್ತಿದೆ.
ಇಂಥಾ ಸ್ನೇಹಿತರನ್ನು ನಿಮ್ಮ ಜೀವನದಿಂದ ದೂರ ಮಾಡಿಕೊಳ್ಳಬೇಡಿ
“ಡಿಜಿಟಲ್ ಕರೆನ್ಸಿಗಳನ್ನು ವಿನಿಮಯದ ಮಾಧ್ಯಮವಾಗಿ ಬಳಸುವ, ಮೌಲ್ಯವನ್ನು ಸಂಗ್ರಹಿಸುವ, ಮೈನಿಂಗ್, ಸೃಷ್ಟಿಸುವುದು, ಇಟ್ಟುಕೊಳ್ಳುವುದು, ಮಾರುವುದು ಅಥವಾ ಡೀಲಿಂಗ್ ಮಾಡುವುದರ ಮೇಲೆ ನಿಷೇಧ ಹೇರಲಾಗಿದೆ,” ಎಂಬುದು ಈ ಮಸೂದೆಯ ಸಾರವಾಗಿದೆ.
ಮೇಲ್ಕಂಡ ಯಾವುದೇ ನಿಯಮದ ಉಲ್ಲಂಘನೆಗೆ ವಾರೆಂಟ್ ರಹಿತವಾಗಿ ಜಾಮೀನು ನೀಡಲು ಸಾಧ್ಯವಿಲ್ಲದಂತೆ ಕಾರಾಗೃಹ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.