ಬೆಂಗಳೂರು: ರಾಜ್ಯದ 4 ಸ್ಥಳಗಳಲ್ಲಿ ವಾಟರ್ ಏರೋಡ್ರೋಮ್ ಸ್ಥಾಪನೆ ಮಾಡಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯದ ಸಮುದ್ರ, ನದಿಗಳಲ್ಲಿ ಹಡಗು, ದೋಣಿಗಳ ರೀತಿಯಲ್ಲಿಯೇ ಏರೋಪ್ಲೇನ್ ಗಳು ಸಂಚಾರ ಮಾಡಲಿವೆ. ಗುಜರಾತ್ ನ ಸಾಬರಮತಿ ನದಿಯಲ್ಲಿ ವಿಮಾನಗಳು ಲ್ಯಾಂಡಿಂಗ್ ಆದ ರೀತಿ, ಹಾರಾಡಿದ ರೀತಿ ರಾಜ್ಯದ 4 ಕಡೆ ವಾಟರ್ ಏರೋಡ್ರೋಮ್ ನಿರ್ಮಾಣ ಮಾಡಲಾಗುವುದು.
ಈ ಹಿಂದೆ ರಾಜ್ಯದ 9 ಸ್ಥಳಗಳಲ್ಲಿ ಏರೋಡ್ರೋಮ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿತ್ತು. ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ಕೆಆರ್ಎಸ್, ತುಂಗಭದ್ರಾ, ಆಲಮಟ್ಟಿ, ಲಿಂಗರಮಕ್ಕಿ, ಇಡಕಲ್ ಜಲಾಶಯಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಅಂತಿಮವಾಗಿ ನಾಲ್ಕು ಸ್ಥಳಗಳಲ್ಲಿ ಏರೋಡ್ರೋಮ್ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಕಾಳಿ ನದಿ ಮುಖಜ ಭೂಮಿ, ಬೈಂದೂರು, ಮಲ್ಪೆ ಮತ್ತು ಮಂಗಳೂರುಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.