ನವದೆಹಲಿ: ಸ್ಥಿರಾಸ್ತಿ ಖರೀದಿಸುವವರು ಹಾಗೂ ಮಾರಾಟ ಮಾಡುವವರಿಗೆ ಇನ್ನು ಟಿಡಿಎಸ್ ಹೊರೆ ಬೀಳಲಿದೆ. ಈಗಾಗಲೇ 50 ಲಕ್ಷ ರೂ.ಗಿಂತ ಅಧಿಕ ಮೊತ್ತದ ಜಮೀನು ಹೊರತುಪಡಿಸಿದ ಸ್ಥಿರಾಸ್ತಿ ಖರೀದಿ ಮಾಡಿದರೆ ಮುದ್ರಾಂಕ ಶುಲ್ಕದ ಮೊತ್ತದ ಮೇಲೆ ಶೇಕಡ 1ರಷ್ಟು ಟಿಡಿಎಸ್ ವಿಧಿಸಲಾಗುವುದು.
ಇನ್ನು ಮುಂದೆ ಖರೀದಿದಾರರು ಅಥವಾ ಮಾರಾಟಗಾರರು ಒಬ್ಬರಿಗಿಂತ ಹೆಚ್ಚಿದ್ದರೆ ಅಥವಾ ಖರೀದಿದಾರರು ಒಬ್ಬರಿಗಿಂತ ಹೆಚ್ಚಿದ್ದರೆ ಶೇಕಡ 1ರಷ್ಟು ಟಿಡಿಎಸ್ ವಿಧಿಸಲಾಗುವುದು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿ ಆರಂಭದ ಅ. 1ರಿಂದಲೇ ಸ್ಥಿರಾಸ್ತಿ ಖರೀದಿ ಮತ್ತು ಮಾರಾಟಕ್ಕೆ ಶೇಕಡ 1ರಷ್ಟು ಟಿಡಿಎಸ್ ವಿಧಿಸಲಾಗುವುದು. ಇದರಿಂದ ಖರೀದಿದಾರರು ಮತ್ತು ಮಾರಾಟಗಾರರಿಗೆ ಟಿಡಿಎಸ್ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.