
ರಾಮನಗರ: ಆಸ್ತಿಯಲ್ಲಿ ಪಾಲು ನೀಡುವಂತೆ ಸಹೋದರಿ ಕೋರ್ಟ್ ನೋಟಿಸ್ ನೀಡಿದ್ದರಿಂದ ಮನನೊಂದ ಸಹೋದರ ಆತ್ಮಹತ್ಯೆ ಮಾಡಿಕೊಂಡ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಶ್ರೀಪತಿಹಳ್ಳಿಯಲ್ಲಿ ನಡೆದಿದೆ.
ಬಿ.ಎಸ್. ಪುಟ್ಟರಾಜು(48) ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ ಮೀನಾಕ್ಷಿ, ಪಾರ್ವತಮ್ಮ, ತ್ರಿವೇಣಿ ಸೇರಿ ಮೂವರು ಸಹೋದರಿಯರಿದ್ದಾರೆ. ಪಿತ್ರಾರ್ಜಿತವಾಗಿ ಬಂದ 7 ಎಕರೆ ಜಮೀನಿನಲ್ಲಿ ಪಾಲು ಕೊಡುವಂತೆ ಮೀನಾಕ್ಷಿ ಮತ್ತು ತ್ರಿವೇಣಿ ದಾವೆ ಹೂಡಿದ್ದರು.
ಪುಟ್ಟರಾಜು ಅವರಿಗೆ ಕೋರ್ಟ್ ನಿಂದ ನೋಟಿಸ್ ಬಂದಿದ್ದು, ಇದರಿಂದ ಮನನೊಂದ ಅವರು ಡೆತ್ ನೋಟ್ ಬರೆದಿಟ್ಟು ಜಮೀನಿನಲ್ಲಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.