ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿ ದಸ್ತಾವೇಜು ನೋಂದಣಿಗೆ ಇ- ಅಸ್ತಿ ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ.
ಇಂದಿನಿಂದಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ನಿಯಮ ಜಾರಿಗೆ ಬರಲಿದ್ದು, ಅಕ್ಟೋಬರ್ 7ರಿಂದ ರಾಜ್ಯ ವ್ಯಾಪಿ ವಿಸ್ತರಣೆಯಾಗಲಿದೆ. ಶುಕ್ರವಾರದಿಂದಲೇ ಕೈ ಬರಹದ ಖಾತಾ ಇರುವ ಆಸ್ತಿ ದಸ್ತಾವೇಜು ನೋಂದಣಿ ಸ್ಥಗಿತವಾಗಿದ್ದು, ಶನಿವಾರ ಮತ್ತು ಭಾನುವಾರ ರಜೆ ಇದ್ದ ಕಾರಣ ಇಂದಿನಿಂದ ಇ- ಆಸ್ತಿ ತಂತ್ರಾಂಶದಿಂದ ಪಡೆದ ಇ-ಖಾತಾ ಇದ್ದರೆ ಮಾತ್ರ ನೋಂದಣಿ ನಡೆಯಲಿದೆ.
ಇ- ಆಸ್ತಿ ಮತ್ತು ಕಾವೇರಿ 2.0 ತಂತ್ರಾಂಶ ಸಂಯೋಜನೆ ಮಾಡಲಾಗಿದೆ. ವೆಬ್ಸೈಟ್ ನಲ್ಲಿ ಮಾಹಿತಿ ದೊರೆತರೆ ಮಾತ್ರ ರಿಜಿಸ್ಟ್ರೇಷನ್ ನಡೆಯಲಿದ್ದು ಈಗಾಗಲೇ ಬಿಡಿಎ ಬಡಾವಣೆ ಮತ್ತು ವಸತಿ ಯೋಜನೆಗಳ ಆಸ್ತಿಗಳಿಗೆ ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ನಲ್ಲಿ ಇ- ಖಾತಾ ನೀಡಲಾಗಿದೆ. ಈ ಸಾಫ್ಟ್ವೇರ್ ಅನ್ನು ಕಾವೇರಿ 2.0 ತಂತ್ರಾಂಶಕ್ಕೆ ಸಂಯೋಜನೆ ಮಾಡಲಾಗಿದೆ. ರಾಜ್ಯದಾದ್ಯಂತ ಅಕ್ಟೋಬರ್ 7ರಿಂದ ಇ- ಆಸ್ತಿ ಕಡ್ಡಾಯ ಜಾರಿಗೆ ಬರಲಿದೆ.