ಬೆಂಗಳೂರು : ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಬಂಧಿಸಲಾಗಿದ್ದು, ಸ್ವಾಮೀಜಿಯ ಅಕ್ರಮದ ಬಗ್ಗೆ ಹಲವು ಸ್ಪೋಟಕ ಮಾಹಿತಿಗಳು ಲಭ್ಯವಾಗಿದೆ.
ಸ್ವಾಮೀಜಿ ಸೋಗಿನಲ್ಲಿ ಹಾಲಶ್ರೀ ಅಕ್ರಮವಾಗಿ ಲಕ್ಷಾಂತರ ಹಣ ಸಂಪಾದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉದ್ಯಮಿ ಗೋವಿಂದ ಪೂಜಾರಿಯಿಂದ ಒಂದೂವರೆ ಕೋಟಿ ರೂ ಹಣ ಪಡೆದು ಹೆಂಡತಿ ಹಾಗೂ ತಂದೆ ಹೆಸರಿನಲ್ಲಿ 8 ಎಕರೆ ಜಮೀನು ಖರೀದಿಸಿದ್ದಾರೆ. ಹಾಗೂ ಚನ್ನಪ್ಪ ಎಂಬುವವರ ಹೆಸರಿನಲ್ಲಿ 40 ಲಕ್ಷದ ಪೆಟ್ರೋಲ್ ಬಂಕ್ ಕೂಡ ನಿರ್ಮಿಸಿದ್ದರು ಎಂದು ತಿಳಿದು ಬಂದಿದೆ.
ವಿಜನಗರ ಜಿಲ್ಲೆಯ ಹೀರೇಹಡಗಲಿಯಲ್ಲಿ 68 ಲಕ್ಷ ಹಣ ನೀಡಿ ಪತ್ನಿ ಹಾಗೂ ತಂದೆ ಮಲ್ಲಯ್ಯ ಹೆಸರಿನಲ್ಲಿ ಜಮೀನು ಖರೀದಿಸಿದ್ದಾರೆ . ಇವೆಲ್ಲವೂ ಅಕ್ರಮವಾದ ಹಣ ಎನ್ನಲಾಗುತ್ತಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಒಂದೂವರೆ ಕೋಟಿ ಹಣ ಪಡೆದ ಸ್ವಾ,ಮೀಜಿ 50 ಲಕ್ಷ ವಾಪಸ್ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇಷ್ಟೇ ಅಲ್ಲದೇ ಬೆಂಗಳೂರಿನ ಹಲವು ಕಡೆ ಸ್ವಾಮೀಜಿ ಹಣ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿಯಿದ್ದು, ಸಿಸಿಬಿ ಪೊಲೀಸರು ಹಣ ರಿಕವರಿ ಮಾಡಲು ಮುಂದಾಗಿದ್ದಾರೆ. ಹಾಲಶ್ರೀ ಬಂಧನದ ಬಳಿಕ ಹಲವು ಸ್ಪೋಟಕ ಮಾಹಿತಿಗಳು ಹೊರ ಬೀಳುತ್ತಿದೆ.
ಸದ್ಯ, ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಹಾಲಶ್ರೀಯನ್ನು ಸೆ.29 ರವರೆಗೆ 10 ದಿನ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.ಬೆಂಗಳೂರಿನ 19 ನೇ ACMM ಕೋರ್ಟ್ ಗೆ ಅಭಿನವ ಹಾಲಶ್ರೀಯನ್ನು ಇಂದು ಹಾಜರುಪಡಿಸಲಾಗಿದ್ದು, ಸೆ.29 ರವರೆಗೆ 10 ದಿನ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬರೋಬ್ಬರಿ 5 ಕೋಟಿ ವಂಚಿಸಿತ್ತು. ಕಬಾಬ್ ಮಾರುವ ವ್ಯಕ್ತಿ, ಸಲೂನ್ ಮೇಕಪ್ ಮ್ಯಾನ್ ಹಾಗೂ ಇನ್ನೋರ್ವನಿಗೆ ಆರ್.ಎಸ್.ಎಸ್ ಮುಖಂಡನ ವೇಷ, ಬಿಜೆಪಿ ಕೇಂದ್ರ ನಾಯಕರ ವೇಷ ತೊಡಿಸಿ ನಾಟಕವಾಡಲು ರಂಗತಾಲೀಮು ನಡೆಸಿ ಉದ್ಯಮಿಯನ್ನು ವಂಚಿಸಿದ್ದರು. ಈ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿ ಎ3 ಆರೋಪಿಯಾಗಿದ್ದಾರೆ.