alex Certify ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಆನ್ಲೈನ್ ನಲ್ಲೇ ಎಲ್ಲಾ ಕಂದಾಯ ದಾಖಲೆ ಲಭ್ಯ, ನಕಲಿ ದಾಖಲೆ ಸೃಷ್ಟಿ, ವಂಚನೆಗೆ ಕಡಿವಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಆನ್ಲೈನ್ ನಲ್ಲೇ ಎಲ್ಲಾ ಕಂದಾಯ ದಾಖಲೆ ಲಭ್ಯ, ನಕಲಿ ದಾಖಲೆ ಸೃಷ್ಟಿ, ವಂಚನೆಗೆ ಕಡಿವಾಣ

ಬೆಂಗಳೂರು: ರಾಜ್ಯದಲ್ಲಿ ಭೂ ದಾಖಲೆ ಡಿಜಟಲೀಕರಣಕ್ಕೆ ವೇಗ ನೀಡಲಾಗಿದೆ. ನಕಲಿ ದಾಖಲೆ ಸೃಷ್ಟಿ, ವಂಚನೆಗೆ ಸಂಪೂರ್ಣ ಕಡಿವಾಣ ಬೀಳಲಿದ್ದು, ಕಂದಾಯ ಇಲಾಖೆ ಎಲ್ಲಾ ದಾಖಲೆಗಳು ಆನ್ಲೈನ್ ನಲ್ಲಿ ಸಿಗಲಿವೆ.

ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಮೊದಲ ಹಂತದಲ್ಲಿ ಆಕಾರ್ ಬಂದ್ ಗಳ ಡಿಜಿಟಲೀಕರಣ ಕಾರ್ಯ ಶೇಕಡ 95 ರಷ್ಟು ಪೂರ್ಣವಾಗಿದೆ. ನಕಲಿ ದಾಖಲೆ ಸೃಷ್ಟಿ ಮತ್ತು ದಾಖಲೆ ತಿದ್ದುವ ಮೂಲಕ ಜನಸಾಮಾನ್ಯರನ್ನು ವಂಚಿಸುವ ಅಕ್ರಮಗಳಿಗೆ ಕಡಿವಾಣ ಹಾಕಲು, ಕಂದಾಯ ದಾಖಲೆಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಲು ಭೂ ದಾಖಲೆ ಡಿಜಿಟಲೀಕರಣ  ಕಾರ್ಯ ಕೈಗೊಳ್ಳಲಾಗಿದೆ.

ತಾಲೂಕು ಮಟ್ಟದ ಎ.ಡಿ.ಎಲ್.ಆರ್. ಕಚೇರಿಗಳಲ್ಲಿರುವ ಎಲ್ಲಾ ರೆಕಾರ್ಡ್ ರೂಂಗಳನ್ನು ಡಿಜಿಟಲೈಸ್ ಮಾಡಿ ಭೂ ದಾಖಲೆಗಳೊಂದಿಗೆ ಸಂಬಂಧಿಸಿದ ಮಾಲೀಕರ ಆಧಾರ್ ಜೋಡಣೆ ಕಾರ್ಯ ನಡೆಯುತ್ತಿದೆ. 2012ರಿಂದ 21ರ ವರೆಗೆ ನೋಂದಣಿಯಾದ ಸುಮಾರು ಎರಡು ಕೋಟಿ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗುತ್ತಿದೆ. 2025 ರ ಒಳಗೆ ರಾಜ್ಯದ ಎಲ್ಲಾ ತಾಲೂಕು ಕಚೇರಿಗಳನ್ನು ಕಾಗದರಹಿತ ಮಾಡುವ ಗುರಿ ಹೊಂದಲಾಗಿದೆ.

ಭೂ ದಾಖಲೆಗಳ ಡೇಟಾಬೇಸ್ ನೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಿಂದ ಆರ್.ಟಿ.ಸಿ. ಸೇರಿ ಆಸ್ತಿಗಳ ಎಲ್ಲಾ ಅವಶ್ಯಕತೆಗಳು ಸಾರ್ವಜನಿಕರಿಗೆ ಆನ್ಲೈನ್ ನಲ್ಲಿಯೇ ಸಿಗಲಿದ್ದು, ಇದರಿಂದ ಭೂ ದಾಖಲೆಗಳಿಗಾಗಿ ಕಂದಾಯ ಇಲಾಖೆ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ವಿಳಂಬ ಮತ್ತು ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...