ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
ಸುಲೋಚನಮ್ಮ(57) ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಅವರ ಎರಡನೇ ಪುತ್ರ ಸಂತೋಷ್ ಕೊಲೆ ಆರೋಪಿಯಾಗಿದ್ದಾನೆ. ಸುಲೋಚನಮ್ಮ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ಬರೆದು ಕೊಡುವಂತೆ ಪೀಡಿಸುತ್ತಿದ್ದ ಸಂತೋಷ್ ಆಗಸ್ಟ್ 27ರಂದು ರಾತ್ರಿ ಕುಡಿದು ಮನೆಗೆ ಬಂದು ತಾಯಿ ಜೊತೆ ಜಗಳವಾಡಿದ್ದಾನೆ.
ಆಸ್ತಿ ಕೊಡಲು ನಿರಾಕರಿಸಿದ್ದರಿಂದ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಮರುದಿನ ಮಧ್ಯಾಹ್ನ ಪಕ್ಕದ ಮನೆಯವರು ಸುಲೋಚನಮ್ಮರಿಗೆ ಊಟ ಕೊಡಲು ಹೋಗಿದ್ದ ಸಂದರ್ಭದಲ್ಲಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಆಟೋ ಚಾಲಕನಾಗಿದ್ದ ಸಂತೋಷ್ ಮದ್ಯ ಸೇವಿಸಿ ಹಣ ಹಾಳು ಮಾಡುತ್ತಿದ್ದ ಕಾರಣ ಸುಲೋಚನಮ್ಮ ಪ್ರತ್ಯೇಕ ವಾಸವಾಗಿದ್ದರು. ಭದ್ರಾವತಿ ಹೊಸ ಮನೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಳನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.