ಬೆಂಗಳೂರು: ಶಾಸಕರು, ವಿಧಾನ ಪರಿಷತ್ ಸದಸ್ಯರು ಹಳೆ ಚಾಳಿಯನ್ನೇ ಮುಂದುವರೆಸಿದ್ದಾರೆ. ಲೋಕಾಯುಕ್ತಕ್ಕೆ ಆಸ್ತಿಯ ವಿವರವನ್ನು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಲ್ಲಿಸಿಲ್ಲ.
ಜೂನ್ 30 ರ ಒಳಗೆ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ಅವಧಿ ಮುಗಿದರೂ ಕೂಡ 113 ಶಾಸಕರು ತಮ್ಮ ಆಸ್ತಿಯ ವಿವರವನ್ನು ಸಲ್ಲಿಸಿಲ್ಲ. ಸಚಿವರಾದ ಬಿ.ಸಿ. ಪಾಟೀಲ್, ಆರಗ ಜ್ಞಾನೇಂದ್ರ, ಮುನಿರತ್ನ, ಕೆ. ಗೋಪಾಲಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿದಂತೆ 113 ಶಾಸಕರು ಇನ್ನೂ ಆಸ್ತಿ ವಿವರ ಸಲ್ಲಿಸಿಲ್ಲ.
ಅದೇ ರೀತಿ ವಿಧಾನಪರಿಷತ್ ಸದಸ್ಯರು ಕೂಡ ನಿಯಮ ಉಲ್ಲಂಘಿಸಿದ್ದಾರೆ. 49 ವಿಧಾನ ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲವೆನ್ನಲಾಗಿದೆ.