
ಬೆಂಗಳೂರು: ಶಾಸಕರು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. 2024 -25 ನೇ ಸಾಲಿನ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ವಿಧಾನಸಭೆ ಸಚಿವಾಲಯಕ್ಕೆ ಲೋಕಾಯುಕ್ತ ನಿಬಂಧಕರು ಪತ್ರ ಬರೆದಿದ್ದು, ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸುವಂತೆ ಸೂಚನೆ ನೀಡಿ, ಜೂನ್ 30 ರೊಳಗೆ ಆಸ್ತಿ ಮಾಹಿತಿ ಸಲ್ಲಿಸುವಂತೆ ಲೋಕಾಯುಕ್ತ ನಿಬಂಧಕರು ಮಾರ್ಚ್ 21ರಂದು ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ವಿಧಾನಸಭೆ ಕಾರ್ಯದರ್ಶಿ ವಿವರ ಸಲ್ಲಿಸುವಂತೆ ಎಲ್ಲಾ ಶಾಸಕರಿಗೆ ಮಾಹಿತಿ ರವಾನಿಸಿದ್ದಾರೆ.