ಬೆಂಗಳೂರು: ಲೋಕಾಯುಕ್ತಕ್ಕೆ ಐವರು ಸಚಿವರು ಸೇರಿ 72 ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಹಾಲಿ ಶಾಸಕರ ಪೈಕಿ 51 ವಿಧಾನಸಭೆ ಸದಸ್ಯರು, 21 ವಿಧಾನ ಪರಿಷತ್ ಸದಸ್ಯರು ಇದುವರೆಗೂ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.
ಈ ಪಟ್ಟಿಯಲ್ಲಿ ಸಚಿವರಾದ ಕೆ.ಎನ್. ರಾಜಣ್ಣ, ರಹೀಮ್ ಖಾನ್, ಜಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ, ಕೆ.ಹೆಚ್. ಮುನಿಯಪ್ಪ ಅವರಿದ್ದಾರೆ. ಹಿಂದಿನ ವಿಧಾನಸಭೆಯ ಅವಧಿಯಲ್ಲಿ ಆಯ್ಕೆಯಾದವರ ಪೈಕಿ ಮೂವರು ಮಾಜಿ ಸಚಿವರಾದ ಬಿ. ಶ್ರೀರಾಮುಲು, ಕೆ.ಸಿ. ನಾರಾಯಣಗೌಡ, ಎಸ್. ಅಂಗಾರ ಮತ್ತು 81 ಪ್ರತಿನಿಧಿಗಳು ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಸಿಲ್ಲ.
ಪ್ರತಿವರ್ಷ ಜೂನ್ ನಲ್ಲಿ ಶಾಸಕರು ಆಸ್ತಿ ವಿವರ ಸಲ್ಲಿಸಬೇಕು. ಆದರೂ, ಹೆಚ್ಚುವರಿ ಆಗಿ ಎರಡು ತಿಂಗಳು ಕಾಲಾವಕಾಶ ನೀಡಲಾಗಿದ್ದರೂ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಹಿಂದಿನ ವಿಧಾನಸಭೆಯಲ್ಲಿ 81 ಜನ ಪ್ರತಿನಿಧಿಗಳು, ಈಗಿನ ವಿಧಾನಸಭೆಯಲ್ಲಿ 72 ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಲೋಕಾಯುಕ್ತ ತಿಳಿಸಿದೆ.