ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಜಿ.ಎಫ್. ಬಾಬು ಅವರ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ.
ಕೆಜಿಎಫ್ ಬಾಬು ಅವರ ಪತ್ನಿ ತರನ್ನಮ್ ಬಳಿ 1,622.11 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ, ತರನ್ನ ಅವರ ಬಳಿ 50,000 ರೂ.ನಗದು, 38.58 ಲಕ್ಷದ ಚಿನ್ನ ವಜ್ರಾಭರಣ ಸೇರಿದಂತೆ 40.59 ಲಕ್ಷ ರೂ. ಆಸ್ತಿ ಇದೆ. ಅವರ ಪತಿ ಕೆಜಿಎಫ್ ಬಾಬು ಬಳಿ 1,621.71 ಕೋಟಿ ರೂ. ಆಸ್ತಿ ಇದೆ.
ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ 150 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಘೋಷಣೆ ಮಾಡಿದ್ದಾರೆ. 23.60 ಕೋಟಿ ರೂ. ಸಾಲ ಇರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. 81.93 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ, 77 ಕೋಟಿ ಮೌಲ್ಯದ ಚರಾಸ್ತಿ ಹೊಂದಿರುವ ಮಲ್ಲಿಕಾರ್ಜುನ ಅವರ ಬಳಿ 16 ಕೆಜಿಗೂ ಅಧಿಕ ಚಿನ್ನ, ಆರು ಕೆಜಿಗೂ ಅಧಿಕ ಬೆಳ್ಳಿ ಇದೆ.
ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಬಳಿ 27.88 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಸಚಿವ ಮುರುಗೇಶ್ ನಿರಾಣಿ 27.22 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.