ಮಹಿಳಾ ಪ್ರಾಧ್ಯಾಪಕರಿಗೆ 250 ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ವಿರುದ್ಧ ಟಿಟಿ ನಗರ ಪೊಲೀಸರು ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ಬರೋಬ್ಬರಿ 250 ಅಶ್ಲೀಲ ಸಂದೇಶಗಳನ್ನು 24 ಗಂಟೆಗಳ ಅವಧಿಯೊಳಗೆ ಕಳುಹಿಸಲಾಗಿದೆ. ಕಳೆದ 20 ವರ್ಷಗಳಿಂದ ಈತ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
48 ವರ್ಷದ ದೂರುದಾರರು ಭೋಪಾಲ್ನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಮಹಿಳಾ ಪ್ರೊಫೆಸರ್ ಸೋಮವಾರ ಪೊಲೀಸರನ್ನು ಸಂಪರ್ಕಿಸಿದ್ದು ದೂರು ನೀಡಿದ್ದಾರೆ. ದೂರಿನ ಪ್ರಕಾರ ಉತ್ತರಪ್ರದೇಶದ ಸುಲ್ತಾನ್ಪುರ ದಲ್ಲಿರುವ ಅವರ ಸಂಬಂಧಿಕರೊಬ್ಬರು ಮಹಿಳಾ ಪ್ರೊಫೆಸರ್ ಸಂಪರ್ಕ ವಿವರಗಳನ್ನು ಅವರ ಸಂಬಂಧಿಕರೊಬ್ಬರಾದ ರಾಜಿಂದರ್ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 20 ವರ್ಷಗಳಿಂದ ತನಗೆ ಕಿರುಕುಳ ನೀಡುತ್ತಿದ್ದ ರಾಜಿಂದರ್ ಎಂಬಾತನೊಂದಿಗೆ ಆಕೆಯ ಸಂಬಂಧಿ ತನ್ನ ವಿಳಾಸ ಮತ್ತು ಕುಟುಂಬದ ವಿವರಗಳನ್ನೂ ಹಂಚಿಕೊಂಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ. ವ್ಯಕ್ತಿ ಆಕೆಗೆ ಪದೇ ಪದೇ ಕರೆ ಮಾಡಿ ಮೆಸೇಜ್ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಭಾನುವಾರದಂದು ರಾಜಿಂದರ್ ತನಗೆ 250 ಕ್ಕೂ ಹೆಚ್ಚು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ ಮತ್ತು ಆಕೆ ಅದನ್ನು ವಿರೋಧಿಸಿದಾಗ ಮತ್ತು ಅವನನ್ನು ಗದರಿಸಿದಾಗ, ಆ ವ್ಯಕ್ತಿ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳಾ ಪ್ರೊಫೆಸರ್ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.