ಬೆಂಗಳೂರು: ಅ. 1 ರಿಂದ ಪರಿಷ್ಕೃತ ಆಸ್ತಿ ಮಾರ್ಗಸೂಚಿ ದರ ಜಾರಿಯಾಗಲಿದೆ. ಸೆ. 30ರ ಮಧ್ಯಾಹ್ನ ಹೊಸ ಅರ್ಜಿ ಸ್ವೀಕೃತಿ ಸ್ಥಗಿತಗೊಳಿಸಲಾಗುವುದು.
ಬುಧವಾರ ಒಂದೇ ದಿನ 26,058 ಸ್ಥಿರಾಸ್ತಿಗಳು ನೋಂದಣಿಯಾಗಿದ್ದು, 312 ಕೋಟಿ ರೂ. ಸಂಗ್ರಹವಾಗಿದೆ. ಈ ಮೂಲಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ. ಸೆ. 25 ರಂದು ಒಂದೇ ದಿನದಲ್ಲಿ 15,1936 ನೋಂದಣಿ ಪ್ರಕ್ರಿಯೆ ನಡೆದು 158.28 ಕೋಟಿ ರೂ. ಶುಲ್ಕ ಸಂಗ್ರಹವಾಗಿತ್ತು.
ಅ. 1ರಿಂದ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯಾಗುವ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿಗೆ ಆಸ್ತಿದಾರರು ಮುಗಿಬಿದ್ದಿದ್ದಾರೆ. ಇದರ ಪರಿಣಾಮ ಬುಧವಾರ ಒಂದೇ ದಿನ 26,058 ಸ್ಥಿರಾಸ್ತಿಗಳು ನೋಂದಣಿಯಾಗಿದ್ದು, ಇತಿಹಾಸ ಸೃಷ್ಟಿಯಾಗಿದೆ.
ಸೆ. 25ರಂದು 15,936 ಆಸ್ತಿ ನೋಂದಣಿ ಪ್ರಕ್ರಿಯೆಯಿಂದ 158.28 ಕೋಟಿ ರೂ. ಸಂಗ್ರಹವಾಗಿದೆ. ಹಾಲಿ ಮಾರ್ಗಸೂಚಿ ದರ ಸೆ. 30ರಂದು ಮಧ್ಯಾಹ್ನ 12 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. ಅಷ್ಟರೊಳಗೆ ಆಸ್ತಿ ನೋಂದಣಿ ಮಾರಾಟ ಮಾಡುವವರು ತಮ್ಮ ಸಮಯ ನಿಗದಿಪಡಿಸಿಕೊಳ್ಳಬೇಕಿದೆ. ಅ. 1 ರಿಂದ ಪರಿಷ್ಕೃತ ಮಾರ್ಗಸೂಚಿ ದರ ಜಾರಿಯಾಗಲಿದೆ ಎಂದು ಹೇಳಲಾಗಿದೆ.