alex Certify ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್: ನಿರ್ಮಾಪಕ ಕೆ. ಪ್ರಭಾಕರ್ ವಿಧಿವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್: ನಿರ್ಮಾಪಕ ಕೆ. ಪ್ರಭಾಕರ್ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಕೆ. ಪ್ರಭಾಕರ್ ಇಂದು ಮಧ್ಯಾಹ್ನ ಜಯನಗರ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆ. ಪ್ರಭಾಕರ್ ಅವರಿಗೆ 64 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಪ್ರಭಾಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ವಿಷ್ಣುವರ್ಧನ್, ಅಂಬರೀಶ್, ಶಶಿಕುಮಾರ್, ಉಪೇಂದ್ರ ಅವರ ಚಿತ್ರಗಳನ್ನು ಕೆ. ಪ್ರಭಾಕರ್ ನಿರ್ಮಾಣ ಮಾಡಿದ್ದಾರೆ. ‘ಅವಳೇ ನನ್ನ ಹೆಂಡತಿ’, ‘ಮುದ್ದಿನ ಮಾವ’, ‘ತುಂಬಿದ ಮನೆ’, ‘ಸೋಲಿಲ್ಲದ ಸರದಾರ’, ‘ಅಣ್ಣ –ತಂಗಿ’, ‘ಗ್ಯಾಂಗ್ ಲೀಡರ್’, ‘ಲವ ಕುಶ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿಯೂ ಅನೇಕ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...