ಸುಖ ದಾಂಪತ್ಯಕ್ಕೆ ಸೆಕ್ಸ್ ಅಗತ್ಯ. ಗರ್ಭ ಧರಿಸಿ ಮಗು ಮನೆಗೆ ಬಂದಾಗ ಮಹಿಳೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಮನೆಗೊಂದು ಪುಟ್ಟ ಮಗು ಬಂದಿರುವ ಸಂತೋಷವನ್ನು ಪತಿ-ಪತ್ನಿ ಎಂಜಾಯ್ ಮಾಡ್ತಾರೆ. ಇದ್ರ ಜೊತೆ ಸೆಕ್ಸ್ ಜೀವನವನ್ನು ಮತ್ತೆ ಪ್ರಾರಂಭಿಸಬೇಕಾಗುತ್ತದೆ. ಹೆರಿಗೆ ನಂತ್ರದ ಮೊದಲ ಸೆಕ್ಸ್ ನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಸಾಮಾನ್ಯವಾಗಿ ಹೆರಿಗೆ ನಂತ್ರ ಅನೇಕ ವಾರ ಅಥವಾ ಅನೇಕ ತಿಂಗಳು ಶಾರೀರಿಕ ಸಂಬಂಧ ಬೆಳೆಸಲು ಮನಸ್ಸಿರುವುದಿಲ್ಲ. ಮಹಿಳೆ ಹಾರ್ಮೋನ್ ನಲ್ಲಾಗುವ ಏರುಪೇರು, ಹೆರಿಗೆ ಸುಸ್ತು, ಮಗು ಪಾಲನೆ ಎಲ್ಲವೂ ಇದಕ್ಕೆ ಕಾರಣವಾಗಿರುತ್ತದೆ. ಇಂಥ ಸಂದರ್ಭದಲ್ಲಿ ದಂಪತಿ ತಬ್ಬಿ, ಮುತ್ತಿಟ್ಟು ಪ್ರೀತಿ ವ್ಯಕ್ತಪಡಿಸಬಹುದು.
ಹೆರಿಗೆ ನಂತ್ರ ಮೊದಲ ಸೆಕ್ಸ್ ವೇಳೆ ನೋವು ಸಾಮಾನ್ಯ. ತುಂಬಾ ನೋವಿದ್ದು, ನೋವು ಇಡೀ ದಿನ ಕಾಡಿದ್ರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಹೆರಿಗೆ ನಂತ್ರ ಅನೇಕ ಬದಲಾವಣೆಗಳಾಗುತ್ತವೆ. ಯೋನಿ ಸಡಿಲವಾಗುತ್ತದೆ. ಇದು ಶಾರೀರಿಕ ಸಂಬಂಧ ಬೆಳೆಸಲು ಸ್ವಲ್ಪ ಅಡ್ಡಿಯುಂಟು ಮಾಡುತ್ತದೆ. ಆದ್ರೆ ಸಮಯ ಸರಿದಂತೆ ಎಲ್ಲವೂ ಸರಿಯಾಗುತ್ತದೆ.
ಹೆರಿಗೆ ನಂತ್ರ ಗರ್ಭಾಶಯದ ಗಾಯ ಅಥವಾ ಹೊಲಿಗೆಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮೂರು ತಿಂಗಳ ಕಾಲ ದೂರವಿರುವುದು ಒಳ್ಳೆಯದು. ನಿಮ್ಮ ದೇಹ ಫಿಟ್ ಎನ್ನಿಸಿದ್ರೆ ಮಾತ್ರ ಸಂಭೋಗ ಬೆಳೆಸಿ.