ಅಜೀರ್ಣ, ಹೊಟ್ಟೆ ಹುರಿ, ಅಸಿಡಿಟಿ, ಸೇರಿದಂತೆ ಹೊಟ್ಟೆ ಇಂದು ಅನಾರೋಗ್ಯದ ಗೂಡಾಗುತ್ತಿದೆ. ಕಾಡುವ ಮಲಬದ್ದತೆ, ಹೊಟ್ಟೆ ಉಬ್ಬರ ಸೇರಿದಂತೆ ಹಲವಾರು ಸಮಸ್ಯೆಗಳು ಆರೋಗ್ಯಕ್ಕೆ ಮಾರಕವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರುಳಿನ ಆರೋಗ್ಯ ಕಾಪಾಡಲು ಒಳ್ಳೆಯ ಬ್ಯಾಕ್ಟೀರಿಯಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ರೊ ಬಯಾಟಿಕ್ ಫುಡ್ಗಳ ಸೇವನೆ ಹೆಚ್ಚು ಮಾಡಿದರೆ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಹಾಗಾದರೆ ಯಾವೆಲ್ಲಾ ಆಹಾರಗಳು ಪ್ರೊ ಬಯಾಟಿಕ್ ಹೆಚ್ಚಿಸುತ್ತವೆ ಎನ್ನುವ ಪಟ್ಟಿ ಇಲ್ಲಿದೆ ನೋಡಿ.
ಪ್ರೊ ಬಯಾಟಿಕ್ನಲ್ಲಿ ಹಾಲಿನ ಉತ್ಪನ್ನಗಳೇ ಮೊದಲು. ಈ ನಿಟ್ಟಿನಲ್ಲಿ ಯೊಗರ್ಟ್, ಮಜ್ಜಿಗೆ, ಲಸ್ಸಿ, ಏಜ್ಡ್ ಚೀಸ್ ಪ್ರಮುಖವಾದವು.
ಹುಳಿ ಕಾಯಿಗಳಿಂದ ಮಾಡಿದ ಚಟ್ನಿ, ಉಪ್ಪಿನಲ್ಲಿ ನೆನಸಿಟ್ಟ ಉಪ್ಪಿನಕಾಯಿಗಳು ಕೂಡ ಪ್ರೊ ಬಯಾಟಿಕ್ನ ಆಗರ.
ಸೋಯಾಬೀನ್ ಸಾಸ್, ಸಾಂಪ್ರದಾಯಿಕವಾಗಿ ತಯಾರಿಸಿದ ಬ್ರೆಡ್, ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿ, ಅಸ್ಪಾರಗಸ್ ಕೂಡ ಪ್ರೊ ಬಯಾಟಿಕ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇದಿಷ್ಟೇ ಅಲ್ಲದೇ ಬೆರ್ರಿಗಳು, ಬಾಳೆಹಣ್ಣು, ಓಟ್ಮೀಲ್, ಬಾರ್ಲಿ, ಅಗಸೇ ಬೀಜ, ಕಿಡ್ನಿ ಬೀನ್ಸ್, ಬ್ಲಾಕ್ ಬೀನ್ಸ್, ಚಿಕ್ ಪಿಯಾಗಳು ಪ್ರೊ ಬಯಾಟಿಕ್ ಅಂಶವನ್ನು ಕರುಳಿಗೆ ನೀಡುತ್ತದೆ.
ಹಿಂದಿನ ಕಾಲದಲ್ಲಿ ಹಿತ, ಮಿತ, ರುಚಿಕರ ಅಡುಗೆಗಳು ಇದ್ದವು. ಆಗ ಮಜ್ಜಿಗೆಯೊಂದೇ ಜೀರ್ಣಕ್ರಿಯೆಗೆ ನೆರವಾಗುತ್ತಿತ್ತು. ಈಗ ಕಾಲ ಬದಲಾದಂತೆ ಆಹಾರ ಶೈಲಿಯೂ ಬದಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ಆಹಾರ ಸೇವನೆ ಮಾಡುವುದು ಉತ್ತಮ