ಗದಗ : ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕಾಲ್ಪನಿಕ ಎಂದು ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು ಯುಟರ್ನ್ ಹೊಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು FSL ವರದಿ ನೋಡಿಲ್ಲ. ಗೃಹಸಚಿವರು ನೋಡಿದ್ದಾರೆ. FSL ವರದಿ ಬಂದಿದೆ. ಘೋಷಣೆ ಕೂಗಿರಬಹುದು ಎಂದು ಹೇಳಿದ್ದಾರೆ ಎಂದರು.
ನನ್ನ ಬಳಿಯಿದ್ದ ವಿಡಿಯೋ ನೋಡಿ ಪರೀಕ್ಷೆ ಮಾಡಿಸಿದ್ವಿ, ಆ ವಿಡಿಯೋ ಖಾಸಗಿಯಾಗಿ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ ಬಂದಿತಲ್ಲ ಅಂತ ಈ ಹಿಂದೆ ಹೇಳಿದ್ದೆ. ಬಿಜೆಪಿಗರಂತೆ ಮಂಡ್ಯದಲ್ಲಿ ಕೂಗಿದ್ದನ್ನು ಮುಚ್ಚಿ ಹಾಕಿಲ್ಲ. ಸರ್ಕಾರದ ವರದಿ ಬಗ್ಗೆ ನಾವು ಅಪಸ್ವರ ಎತ್ತಿದ್ದೇವೆ. ಸರ್ಕಾರದ ವರದಿಯೇ ಫೈನಲ್, ಆರ್ ಎಸ್ ಎಸ್ ವರದಿ ಒಪ್ಪಲ್ಲ ಎಂದು ಹೇಳಿದ್ದಾರೆ.