ಕೆನಡಾದ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಎದುರು ಖಲಿಸ್ತಾನ್ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಖಲಿಸ್ತಾನ್ ಪರ ಬೆಂಬಲಿಗರು ತಮ್ಮ ಧ್ವಜಗಳೊಂದಿಗೆ ಭಾರತೀಯ ದೂತಾವಾಸ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಅವರು ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನಿಸಿರುವುದು ಕಂಡುಬಂದಿದೆ. ಇದಕ್ಕೆ ತಿರುಗೇಟು ನೀಡಿದ ಅನಿವಾಸಿ ಭಾರತೀಯರ ಗುಂಪು ತ್ರಿವರ್ಣ ಧ್ವಜ ಹಿಡಿದು ಕಾನ್ಸ್ ಲೇಟ್ ಮುಂದೆ ಖಲಿಸ್ತಾನಿಗಳ ಪ್ರತಿಭಟನೆಯನ್ನು ಎದುರಿಸಿದರು. ಖಲಿಸ್ತಾನಿಗಳು ಪ್ರತಿಭಟಿಸ್ತಿದ್ದ ಕಚೇರಿಯ ಮತ್ತೊಂದು ಬದಿಯಲ್ಲಿ ನಿಂತ ಭಾರತ ಮೂಲದವರು ದೇಶದ ಪರ ಘೋಷಣೆ ಕೂಗಿ ಸವಾಲು ಹಾಕಿದರು.
ಟೈಗರ್ ಫೋರ್ಸ್ ಮತ್ತು ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಮುಂದಾಳು ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಖಲಿಸ್ತಾನಿಗಳು ಈ ಪ್ರತಿಭಟನೆ ನಡೆಸಿದರು. ಜುಲೈ 8ರ ಶನಿವಾರದಂದು ನಡೆದಿರುವ ಘಟನೆಯ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಇತ್ತೀಚಿಗೆ ಖಲಿಸ್ತಾನ ಪರ ಹೋರಾಟಗಾರರು ಭಾರತೀಯ ದೂತವಾಸ ಕಚೇರಿಗೆ ಬೆಂಕಿ ಹಚ್ಚಿದ್ದರು.