ಪ್ರೊ ಕಬಡ್ಡಿಯ ಲೀಗ್ ಹಂತದ ಪಂದ್ಯಗಳು ಇನ್ನೇನು ಮುಕ್ತಾಯಗೊಳ್ಳಲಿದ್ದು, ಡಿಸೆಂಬರ್ 26ಕ್ಕೆ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಹರಿಯಾಣ ಸ್ಟೀಲರ್ಸ್, ಸೇರಿದಂತೆ ಪಟ್ನಾ ಪೈರೇಟ್ಸ್, ದಬಾಂಗ್ ಡೆಲ್ಲಿ ಹಾಗೂ ಯುಪಿ ಯೋದಾಸ್ ತಂಡ ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತ ಪಡಿಸಿಕೊಂಡಿದ್ದು, ಉಳಿದ ಎರಡು ಸ್ಥಾನಕ್ಕಾಗಿ ನಾಲ್ಕು ತಂಡಗಳು ಇನ್ನೂ ಹೋರಾಟ ನಡೆಸುತ್ತಲೇ ಇವೆ. ಡಿಸೆಂಬರ್ 26ಕ್ಕೆ ಎಲಿಮಿನೇಟರ್ ಪಂದ್ಯಗಳಿದ್ದರೆ 27 ರಂದು ಸೆಮಿ ಫೈನಲ್ ಹಾಗೂ 29ರಂದು ಫೈನಲ್ ಪಂದ್ಯ ನಡೆಯುತ್ತಿದೆ.
ಇಂದು ನಡೆಯಲಿರುವ ಪ್ರೊ ಕಬಡ್ಡಿ ಪಂದ್ಯಗಳಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾದರೆ, ಪುಣೇರಿ ಪಲ್ಟಾನ್ ಹಾಗೂ ತೆಲುಗು ಟೈಟಾನ್ಸ್ ಕಾದಾಡಲಿವೆ. ಬೆಂಗಾಲ್ ವಾರಿಯರ್ಸ್ ಹೊರತುಪಡಿಸಿ ಉಳಿದ ಮೂರು ತಂಡಗಳಿಗೆ ಇಂದು ಗೆಲ್ಲಲೇ ಬೇಕಾದ ಅನಿವಾರ್ಯವಿದೆ.