
ಬೆಂಗಳೂರಿನಲ್ಲಿದ್ದ ಪ್ರೊ ಕಬಡ್ಡಿ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿದ್ದು, ಬೆಂಗಳೂರು ಬುಲ್ಸ್ ಡಿಪೆಂಡಿಂಗ್ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಜೊತೆ ಭರ್ಜರಿ ಜಯಸಾಧಿಸುವ ಮೂಲಕ ಮೂರನೇ ಸ್ಥಾನಕ್ಕೇರಿದೆ. ಇಂದಿನಿಂದ ಡಿಸೆಂಬರ್ ಇಪ್ಪತ್ತರವರೆಗೆ ಪುಣೆಯ ಬೆಳವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕಬ್ಬಡಿ ಪಂದ್ಯಗಳು ನಡೆಯಲಿವೆ.
ಮೊದಲ ಪಂದ್ಯದಲ್ಲಿ ಯು ಮುಂಬ ಹಾಗೂ ಪಟ್ನಾ ಪೈರೇಟ್ಸ್ ಮುಖಮುಖಿಯಾಗಲಿದ್ದು, ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಜೊತೆ ಪುಣೆರಿ ಪಲ್ಟಾನ್ ಮನೆಯ ಅಂಗಳದಲ್ಲಿ ತನ್ನ ಮೊದಲ ಪಂದ್ಯದಲ್ಲಿ ಅಬ್ಬರಿಸಲು ಸಜ್ಜಾಗಿದೆ.
ನಿನ್ನೆ ಕಬಡ್ಡಿ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರಿಗೆ ಇಂದು ಎರಡು ಬ್ಲಾಕ್ ಬಸ್ಟರ್ ಪಂದ್ಯವನ್ನು ನೋಡುವ ಅವಕಾಶ ಸಿಕ್ಕಿದೆ.